ಮುಂಡೂರು: ಬೆಂಕಿ ನಂದಿಸಿ ಅಪಾಯ ತಪ್ಪಿಸಿದ ಕಾಂಗ್ರೆಸ್ ತುರ್ತು ಸೇವಾ ಸಮಿತಿ 

0

ಪುತ್ತೂರು: ಮುಂಡೂರು ಸಮೀಪದ ಆಲಡ್ಕ ದೇವಸ್ಥಾನ ಬಳಿ ಬೆಂಕಿ ಕಾಣಿಸಿಕೊಂಡಿದ್ದು ಈ ವೇಳೆ ಮುಂಡೂರು ವಲಯ ಕಾಂಗ್ರೆಸ್ ನ ತುರ್ತು ಸೇವಾ ಸಮಿತಿ ಸದಸ್ಯರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ ಘಟನೆ ಫೆ.25ರಂದು ನಡೆದಿದೆ.

ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಮುಂಡೂರು ತುರ್ತು ಸೇವಾ ಸಮಿತಿ ಅಧ್ಯಕ್ಷ ಮಯಾಝ್ ಮುಲಾರ್, ವಲಯ ಕಾರ್ಯದರ್ಶಿ ಅಶ್ರಫ್ ಮುಲಾರ್, ಕೆದಂಬಾಡಿ ವಲಯ ಕಾಂಗ್ರೆಸ್ ಸದಸ್ಯ ಭಾಸ್ಕರ ನಾಯ್ಕ, ಫವಾಝ್ ಮುಲಾರ್, ಜಗದೀಶ್ ಬದಿಯಡ್ಕ, ರಕ್ಷಿತ್ ಮುಂಡೂರು ಕಾರ್ಯಾಚರಣೆಯಲ್ಲಿ ಭಾಗವಹಿದ್ದರು. ಇವರ ತುರ್ತು ಸ್ಪಂದನೆಗೆ ಮುಂಡೂರು ಪರಿಸರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here