






ಪುತ್ತೂರು: ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದ ಸಹಾಯಕ ಸಂಚಾರ ಅಧೀಕ್ಷಕ ಈಶ್ವರ್ ಅವರು ಫೆ.28ರಂದು ಸೇವಾನಿವೃತ್ತಿ ಹೊಂದಿದ್ದು, ಪುತ್ತೂರು ಘಟಕದಲ್ಲಿ ಅವರನ್ನು ಬೀಳ್ಕೊಡಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಅವರು ವಹಿಸಿದ್ದರು. ವಿಭಾಗೀಯ ಕಾರ್ಯಾಧ್ಯಕ್ಷ ಲೋಕೇಶ್ವರ, ಸಹಯಕ ಸಂಚಾರ ನಿರೀಕ್ಷಕ ಅಚ್ಚುತ ಭಟ್, ಲೆಕ್ಕಪತ್ರ ಮೇಲ್ವಿಚಾರಕ ಪೂರ್ಣೇಶ್, ರಮೇಶ್ ಶೆಟ್ಟಿ, ಮಿಥುನ್ ಹಾಗು ಈಶ್ವರ ಅವರ ಕುಟುಂಬಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.













