ಕೆಯ್ಯೂರು ಬೈಕ್ ಅಪಘಾತ – ಕುಂಬ್ರದ ಭುವನ್ ಮೃತ್ಯು

0

ಪುತ್ತೂರು: ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಕುಂಬ್ರ ನಿವಾಸಿ ಭುವನ್ ಗೌಡ ( 34 ವ) ಸಾವಿಗೀಡಾದ ಘಟನೆ ಮಾ.3 ರಂದು ತಿಂಗಳಾಡಿ ಸಮೀಪದ ತ್ಯಾಗರಾಜ ನಗರದಲ್ಲಿ ನಡೆದಿದೆ.

ಕುಂಬ್ರ ಶಾಲಾ ಬಳಿಯ ನಿವಾಸಿಯಾಗಿರುವ ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾಗಿರುವ ಭುವನ್ ಗೌಡ ರವರು ನಿಂತಿಕಲ್ಲುನಲ್ಲಿರುವ ಕುಬೇರ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದು ಮಾ.3 ರಂದು ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ತ್ಯಾಗರಾಜನಗರದಲ್ಲಿ ಮಜ್ಜಾರಡ್ಕಕ್ಕೆ ತಿರುಗುವ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಭುವನ್ ರವರು ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದರು . ತಕ್ಷಣವೇ ಅವರನ್ನು ಸ್ಥಳೀಯರು ಮೆಡ್ ಲ್ಯಾಂಡ್ ಆಸ್ಪತ್ರೆಗೆ ಕರೆ ತಂದು ಅಲ್ಲಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.


ಮೃತರು ತಂದೆ ತಾಯಿ ಹಾಗೂ ಸಹೋದರಿಯರಾದ ನಯನಾ ಶರತ್ ಕುಮಾರ್ ಮಾಡಾವು, ಸೌಮ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಭುವನ್ ಗೌಡ ರವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಹಿಂದೂ ಮುಸ್ಲಿಂ ಯುವಕರು ಸೇರಿಕೊಂಡು ಆಸ್ಪತ್ರೆಗೆ ತಂದರೂ ಉಳಿಯಲಿಲ್ಲ ಜೀವ…
ಭುವನ್ ಗೌಡ ರವರು ಎಂದಿನಂತೆ ಮಾ.3 ರಂದು ಕೂಡ ತನ್ನ ಬೈಕಿನಲ್ಲಿ ಕುಂಬ್ರ ಮನೆ ಕಡೆಗೆ ಬರುತ್ತಿದ್ದರು. ಈ ವೇಳೆ ತ್ಯಾಗರಾಜನಗರದಲ್ಲಿ ಮಜ್ಜಾರಡ್ಕಕ್ಕೆ ತಿರುಗುವ ರಸ್ತೆ ಬಳಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಭುವನ್ ರವರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಇದನ್ನು ಕಂಡ ಅಲ್ಲೇ ಇರುವ ಮನೆಯ ಅಭಿಲಾಷ್ ಎಂಬವರು ತಕ್ಷಣವೇ ಹಿಂದೂ ಜಾಗರಣ ವೇದಿಕೆಯ ಅಶೋಕ್ ತ್ಯಾಗರಾಜನಗರರವರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಅಶೋಕ್ ರವರು ಗಂಭೀರ ಗಾಯಗೊಂಡಿದ್ದ ಭುವನ್ ರವರನ್ನು ಉಪಚರಿಸುತ್ತಿದ್ದ ಸಮಯಕ್ಕೆ ಕುಂಬ್ರದಿಂದ ತಿಂಗಳಾಡಿ ಕಡೆಗೆ ಬರುತ್ತಿದ್ದ ಎಸ್ ಪ್ರಸ್ಸೊ ಕಾರೊಂದರಲ್ಲಿದ್ದ ರಜಾಕ್ ಮತ್ತು ಇತರರು ಸೇರಿಕೊಂಡು ಭುವನ್ ರವರನ್ನು ತಮ್ಮ ಕಾರಲ್ಲಿ ಹಾಕಿಕೊಂಡು ಸಂಪ್ಯದ ಮೆಡ್ ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಹಿಂದೂ ಮುಸ್ಲಿಂ ಯುವಕರು ಸೇರಿಕೊಂಡು ಭುವನ್ ರವರನ್ನು ಆಸ್ಪತ್ರೆಗೆ ಕರೆ ತಂದರೂ ಅವರು ಜೀವ ಉಳಿಸಲು ಸಾಧ್ಯವಾಗಲಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.

LEAVE A REPLY

Please enter your comment!
Please enter your name here