






ಪುತ್ತೂರು: ಬಸ್ನಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾನೆಂದು ಯುವತಿ ಪ್ರಶ್ನಿಸಲು ಹೋದಾಗ ಇದನ್ನು ಗಮನಿಸಿದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ ಘಟನೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಮಾ.3ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.


ಸುಳ್ಯ ಮೂಲದ ಯುವತಿ ಪುತ್ತೂರಿಗೆ ಬಸ್ನಲ್ಲಿ ಬಂದಾಗ ಬಸ್ನಿಲ್ದಾಣದಲ್ಲಿ ಇಳಿಯುತ್ತಿದ್ದ ಯುವಕನ ಕೈ ಆಕೆಗೆ ತಾಗಿದೆ. ಆದರೆ ಯುವಕ ಬೇಕೆಂದೆ ಕೈ ತಾಗಿಸಿದ್ದಾನೆಂದು ತಿಳಿದು ಯುವತಿ ಯುವಕನನ್ನು ಪ್ರಶ್ನಿಸಲು ಹೋಗುವುದನ್ನು ನೋಡಿದ ಸಾರ್ವಜನಿಕರು ಹಿಂದು ಮುಂದು ನೋಡದೆ ಯುವಕನಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ವೇಳೆ ಯುವಕನ ಮೇಲಿನ ಸಂಶಯದಿಂದ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಸೌಹಾರ್ದತೆಯಲ್ಲಿ ಮುಗಿಸಲಾಗಿದೆ ಎಂದು ತಿಳಿದು ಬಂದಿದೆ.













