ಮಹಿಳಾ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ : ಪೊಲೀಸ್ ಸಿಬ್ಬಂದಿ ಕೊರತೆ ಕುರಿತು ಸರಕಾರಕ್ಕೆ ವರದಿ ಸಲ್ಲಿಕೆ

0

ಪುತ್ತೂರು:ಪುತ್ತೂರಿನಲ್ಲಿರುವ ದ.ಕ.ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ|ನಾಗಲಕ್ಷ್ಮೀ ಚೌದರಿ ಅವರು ಮಾ.5ರಂದು ಭೇಟಿ ನೀಡಿ,ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಮಾಹಿತಿ ಪಡೆದುಕೊಂಡು, ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.


ಮಹಿಳಾ ಠಾಣೆಗೆ ವಾರಗಳ ನಡುವೆ ಬಂದ ದೂರುಗಳ ಮಾಹಿತಿ ಪಡೆದುಕೊಂಡ ಅವರು,ದೂರುದಾರರಿಗೆ ಠಾಣೆಯಿಂದಲೇ ಕರೆ ಮಾಡಿ ಠಾಣೆಯಲ್ಲಿ ಯಾವ ರೀತಿಯ ಸ್ಪಂದನೆ ನೀಡಿದ್ದಾರೆ ಎಂಬುದನ್ನು ವಿಚಾರಿಸಿದರು.ಆಂತರಿಕ ಸಮಿತಿಯಲ್ಲಿ ಹತ್ತು ಮಂದಿಗೂ ಅಧಿಕ ಸದಸ್ಯರು ಬೇಕಾಗಿದ್ದು,ಈ ಮಾಹಿತಿಯ ಕುರಿತು ಠಾಣೆಯಲ್ಲಿ ಫಲಕ ಅಳವಡಿಸಬೇಕು.ಜನರ ಸೇವೆ ಮಾಡುವ ಎಲ್ಲರೂ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಇನ್‌ಸ್ಪೆಕ್ಟರ್‌ಗೆ ಸೂಚಿಸಿದರು.ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧಿಕ್ಷಕ ಪ್ರಮೋದ್ ಕುಮಾರ್, ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ಮಹಿಳಾ ಆಯೋಗದ ಕೋರ್ ಕಮಿಟಿಯ ಸದಸ್ಯೆ ಅನು, ತಹಶೀಲ್ದಾರ್ ಎಸ್.ಬಿ ಕೂಡಲಗಿ, ಜಿಲ್ಲೆಯ ಪ್ರಮುಖರಾದ ಸುರೇಖ ಚಂದ್ರಹಾಸ ಉಳ್ಳಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್, ಪುತ್ತೂರು ಸಿಡಿಪಿಒ ಹರೀಶ್, ಮೇಲ್ವಿಚಾರಕಿಯರಾದ ಯಶೋಧ,ಹರಿಣಾಕ್ಷಿ, ಸಾಂತ್ವನ ಕೇಂದ್ರದ ನಿಶಾ ಮತ್ತಿತರರು ಉಪಸ್ಥಿತರಿದ್ದರು.

ಸಿಬ್ಬಂದಿ ಕೊರತೆಗೆ ಸರಕಾರಕ್ಕೆ ವರದಿ
ಠಾಣೆಯಲ್ಲಿರುವ ಸಿಬ್ಬಂದಿಗಳ ಕೊರತೆ ಕುರಿತು ಸರಕಾರಕ್ಕೆ ಪತ್ರ ಬರೆದು,ಸಿಬ್ಬಂದಿ ಕೊರತೆ ನೀಗಿಸಿ ಈ ಕುರಿತು ಆಯೋಗಕ್ಕೆ ವರದಿಯನ್ನು ನೀಡಲು ಸೂಚಿಸಲಾಗುವುದು.ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ.ಇನ್ನೂ ವರದಿ ನೀಡಿಲ್ಲ.ನ್ಯಾಯಾಲಯದ ಆದೇಶದ ಬಳಿಕ ವರದಿಯನ್ನು ನೀಡಲಿದ್ದಾರೆ
ಡಾ|ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷರು,ರಾಜ್ಯ ಮಹಿಳಾ ಆಯೋಗ

LEAVE A REPLY

Please enter your comment!
Please enter your name here