






ಪುತ್ತೂರು: ಮುಕ್ವೆ ಜಂಕ್ಷನ್ ನಲ್ಲಿ ತಲವಾರು ಹಿಡಿದುಕೊಂಡು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಕೈ ನಿವಾಸಿ ಅಬ್ದುಲ್ ರಹಿಮಾನ್ ಆರೋಪಿಯಾಗಿದ್ದು, ಈತ ಮಾ.6ರಂದು ರಾತ್ರಿ ಮುಕ್ವೆ ಮಸೀದಿಯ ಬಳಿ ಬಂದು ಈ ದಿನ ಸಂಜೆ ಪುರುಷರಕಟ್ಟೆ ಬಳಿ ನಡೆದ ಗಲಾಟೆ ಸಮಯ ಅಲ್ಲಿದ್ದ ಸಿಯಾಬ್ ಎಲ್ಲಿ ಎಂದು ಕೇಳಿ ಗಲಾಟೆ ಮಾಡುತ್ತಿದ್ದ. ಈ ವೇಳೆ ಮಸೀದಿ ಕಮಿಟಿಯ ಸದಸ್ಯರು ಅಲ್ಲಿಂದ ಆತನನ್ನು ಕಳುಹಿಸಿದ್ದರು. 10 ನಿಮಿಷದ ಬಳಿಕ ಮತ್ತೆ ಬಂದ ಅಬ್ದುಲ್ ರಹಿಮಾನ್ ಕೈಯಲ್ಲಿ ತಲವಾರು ಹಿಡಿದು ಇಂಟರ್‌ಲಾಕ್‌ಗೆ ಗೀರಿ ತಲವಾರು ಬೀಸುತ್ತಾ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಬಳಿಕ ಜನ ಸೇರುವುದನ್ನು ನೋಡಿ ಅಬ್ದುಲ್ ರಹಿಮಾನ್ ಅಲ್ಲಿಂದ ರಿಕ್ಷಾವೊಂದರಲ್ಲಿ ತೆರಳಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಹಮ್ಮದ್ ಸಿರಾಜುದ್ದೀನ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













