






ಹಿಂದೆ ಒಂದು ಪ್ರಿಂಟಿಂಗ್ ಪ್ರೆಸ್ ಇದ್ದರೆ ಅದರಲ್ಲಿ ಅವರ ಪತ್ರಿಕೆ ಬಿಟ್ಟು ಬೇರೆ ಯಾವುದೇ ಪತ್ರಿಕೆ ಮುದ್ರಣ ಆಗುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ತಮಗೆ ಸ್ಪರ್ಧೆ ಇರುವ ಪತ್ರಿಕೆಗಳನ್ನೂ ಪ್ರೆಸ್ಗಳು ಪ್ರಿಂಟಿಂಗ್ ಮಾಡುತ್ತವೆ. ಟೈಮ್ಸ್ ಮಂಗಳೂರು ಪ್ರೆಸ್ನಲ್ಲಿ 23 ಪತ್ರಿಕೆಗಳು ಮುದ್ರಣಗೊಳ್ಳುತ್ತಿದೆ. ಉದಯವಾಣಿಯಲ್ಲಿ ಕನ್ನಡ ಪ್ರಭ ಮತ್ತು ಇತರ ಪತ್ರಿಕೆಗಳು, ಪ್ರಜಾವಾಣಿ ಪ್ರೆಸ್ನಲ್ಲಿ ಹಿಂದೂ, ಸುದ್ದಿ ಬಿಡುಗಡೆ ಪತ್ರಿಕೆ ಮುದ್ರಣವಾಗುತ್ತಿದೆ. ಹೀಗೆ ರಾಜ್ಯ, ದೇಶದಾದ್ಯಂತ ಒಂದು ಪ್ರೆಸ್ನಲ್ಲಿ ಹಲವಾರು ಪತ್ರಿಕೆಗಳು ಮುದ್ರಣಗೊಳ್ಳುತ್ತದೆ. ಒಂದೇ ವಾಹನದಲ್ಲಿ ಪರಸ್ಪರ ಸ್ಪರ್ಧೆಯಲ್ಲಿರುವ ಪತ್ರಿಕೆಗಳು ಏಜೆಂಟರನ್ನು ತಲುಪುತ್ತದೆ. ಒಂದೇ ಏಜೆಂಟರಲ್ಲಿ ಎಲ್ಲಾ ಪತ್ರಿಕೆಗಳು ಮಾರಾಟಗೊಳ್ಳುತ್ತದೆ. ಒಂದು ಸ್ಟುಡಿಯೋದಲ್ಲಿ ಹಲವಾರು ಚಾನೆಲ್ಗಳು ಕೆಲಸ ಮಾಡುತ್ತದೆ. ಒಬ್ಬ ವ್ಯಕ್ತಿ ಹಲವಾರು ಪತ್ರಿಕೆಗಳಿಗೂ, ಚಾನೆಲ್ಗಳಿಗೂ ಕೆಲಸ ಮಾಡುತ್ತಾರೆ. ಒಬ್ಬರಿಗೆ ಒಬ್ಬರು ಪೂರಕವಾಗಿ ಕೆಲಸ ಮಾಡಿದರೂ ಅವರ ಕಂಟೆಂಟ್ಗಳು ಬೇರೆ ಬೇರೆಯಾಗಿದ್ದು ತಮ್ಮದೇ ಗ್ರಾಹಕರನ್ನು ಆರ್ಥಿಕತೆಯನ್ನು ಹೊಂದಿರುತ್ತವೆ.


ಇದೇ ರೀತಿಯಲ್ಲಿ ಪುತ್ತೂರಿನಲ್ಲಿ ಎಲ್ಲಾ ಮಾಧ್ಯಮದವರಿಗೂ ಸಮಾನ ವೇದಿಕೆಯನ್ನು ಕೊಟ್ಟು ಎಲ್ಲಾ ಮಾಧ್ಯಮದವರಿಗೂ ಕಂಟೆಂಟ್ ತಲುಪಿಸುವ ಯೋಚನೆಯನ್ನು ಹಲವಾರು ವರ್ಷಗಳಿಂದ ಇಟ್ಟುಕೊಂಡಿದ್ದೇವೆ. ಪುತ್ತೂರಿನಲ್ಲಿ 38ವರ್ಷಗಳ ಹಿಂದೆ ಪತ್ರಿಕೆ ಪ್ರಾರಂಭಿಸಿದಾಗ ಪತ್ರಿಕೆಯೇ ಮಾಧ್ಯಮವಾಗಿತ್ತು. ಆಕಾಶವಾಣಿಯೂ ಇತ್ತು. ನಂತರ ಇ-ಪೇಪರ್, ವೆಬ್ಸೈಟ್, ಯೂಟ್ಯೂಬ್ ಚಾನೆಲ್, ವೀಜ್ಯುಲ್ ಮೀಡಿಯಾಗಳು, ವಾಟ್ಸ್ಪ್, ಫೆಸ್ಬುಕ್ಗಳು, ಇನ್ಸ್ಟಾಗ್ರಾಮ್ ಈ ಎಲ್ಲಾ ಮಾಧ್ಯಮಗಳನ್ನು ಸುದ್ದಿ ಉಪಯೋಗಿಸುತ್ತಿದೆ. ಈ ಎಲ್ಲಾ ವಿಷಯಗಳನ್ನು ಜಗತ್ತಿನಾದ್ಯಂತ ತಲುಪಿಸುತ್ತಿದ್ದೇವೆ. ಪುತ್ತೂರಿನಲ್ಲಿ ಸುದ್ದಿಯಂತೆ ಹಲವಾರು ಮಾಧ್ಯಮಗಳಿದ್ದು ಅವುಗಳು ತಮ್ಮದೇ ಆದ ವೀಕ್ಷಕರನ್ನು ಹೊಂದಿವೆ.



ಪುತ್ತೂರಿನಲ್ಲಿರುವ ಎಲ್ಲಾ ಮಾಧ್ಯಮಗಳನ್ನು ಒಂದೇ ಪ್ಲ್ಯಾಟ್ ಫಾರ್ಮ್ನಲ್ಲಿ (ವೇದಿಕೆ) ತಂದು ಎಲ್ಲರಿಗೂ ತಮ್ಮ ತಮ್ಮ ಕೆಲಸಗಳಿಗೆ ಅವಕಾಶಗಳನ್ನು ಒದಗಿಸುವ ಸುದ್ದಿಮೀಡಿಯಾ ಹೌಸ್ ಪುತ್ತೂರು ಎಂಬ ಸಂಸ್ಥೆಯನ್ನು ಪ್ರಾರಂಭಿಸಬೇಕೆಂದಿದ್ದೇವೆ. ಅವರಲ್ಲಿ ದೊರಕುವ ಕಂಟೆಂಟ್ಗಳನ್ನು ಜಿಲ್ಲೆಯ, ರಾಜ್ಯ, ದೇಶ ಮಾತ್ರವಲ್ಲ ಜಗತ್ತಿನಾದ್ಯಂತ ಇರುವ ಜನರಿಗೆ ಹಂಚುವ ವ್ಯವಸ್ಥೆಯನ್ನು ಒದಗಿಸುವ ಹಾಗೂ ಆರ್ಥಿಕ ವೇದಿಕೆಯನ್ನಾಗಿಯೂ ಮಾಡುವ ಸುದ್ದಿ ಮೀಡಿಯಾ ಹೌಸ್ ಎಂಬ ಪ್ರತ್ಯೇಕ ವಿಭಾಗವನ್ನು ತೆರೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಇದರಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮತ್ತು ಸಂಪಾದನೆ ಮಾಡಲು ಬಯಸುವವರಿಗೆ ಸುದ್ದಿ ಮೀಡಿಯಾ ಹೌಸ್ ಪುತ್ತೂರು ಅವಕಾಶವನ್ನು ಒದಗಿಸಲಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ.
ಈ ವ್ಯವಸ್ಥೆಯು ಯಶಸ್ವಿಯಾದಲ್ಲಿ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಬೆಂಗಳೂರಿಗೂ ವಿಸ್ತರಿಸಲಿದ್ದೇವೆ.
– ಡಾ.ಯು.ಪಿ ಶಿವಾನಂದ










