






ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಬೀರಮಲೆಯಲ್ಲಿನ ಪ್ರಜ್ಞಾ ಆಶ್ರಮಕ್ಕೆ ಅಗತ್ಯವುಳ್ಳ ಬಿಸಿ ನೀರಿನ ಗೀಸರನ್ನು ಘಟಕದ ವತಿಯಿಂದ ಮಾ.8 ರಂದು ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಸಮಿತ್ ಪರ್ಪುಂಜ, ಉಪಾಧ್ಯಕ್ಷ ಅವಿನಾಶ್ ಹಾರಾಡಿ, ಮಾಜಿ ಅಧ್ಯಕ್ಷ ಜಯರಾಮ ಬಿ.ಎನ್, ಸಮಾಜ ಸೇವಾ ನಿರ್ದೇಶಕ ಶಿವಪ್ರಸಾದ್ ಕುಂಬ್ರ, ಸಂಘಟನಾ ಕಾರ್ಯದರ್ಶಿ ಲಿಂಗಪ್ಪ ಪೂಜಾರಿ ನೈತಾಡಿ, ಪ್ರಿಯಾಶ್ರೀ,ರಕ್ಷಾ ಹಾಗೂ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.













