ಐತ್ತೂರು: ಸ್ಕೂಟರ್ ಪಲ್ಟಿ-ಸವಾರರಿಗೆ ಗಾಯ

0

ಕಡಬ: ನಾಯಿ ಅಡ್ಡಬಂದ ವೇಳೆ ಸವಾರನ ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿಯಾಗಿ ಸವಾರರಾಗಿದ್ದ ತಂದೆ, ಮಗ ಗಾಯಗೊಂಡ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಶಿವಾಜಿನಗರ ಎಂಬಲ್ಲಿ ಮಾ.9ರಂದು ಬೆಳಿಗ್ಗೆ ನಡೆದಿದೆ.


ಸ್ಕೂಟರ್ ಸವಾರ ನಿವಿನ್ ಕುರಿಯಾಕೋಸ್ ಹಾಗೂ ಸಹಸವಾರ ಅವರ ತಂದೆ ಕುರಿಯಕೋಸ್ ಪಿ.ಎ.ಗಾಯಗೊಂಡವರಾಗಿದ್ದಾರೆ. ಇವರು ಮಾ.9ರಂದು ಬೆಳಿಗ್ಗೆ ಕರ್ಮಾಯಿಯಿಂದ ಮರ್ದಾಳ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದವರು ಐತ್ತೂರು ಗ್ರಾಮದ ಶಿವಾಜಿನಗರ ಎಂಬಲ್ಲಿಗೆ ತಲುಪಿದಾಗ ನಾಯಿ ಅಡ್ಡ ಬಂದಿದ್ದು, ಈ ವೇಳೆ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಹಿಂಬದಿ ಸವಾರರಾಗಿದ್ದ ಕುರಿಯಕೋಸ್ ಪಿ.ಎ.ಅವರಿಗೆ ತಲೆಗೆ, ಬಲ ಕಾಲಿಗೆ ಹಾಗೂ ತೊಡೆಗೆ ಗಾಯವಾಗಿದೆ. ಸವಾರ ನಿವಿನ್ ಕುರಿಯಕೋಸ್‌ರವರಿಗೆ ಎಡಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಎಂಬವರು ಆಟೋ ರಿಕ್ಷಾದಲ್ಲಿ ಕಡಬದ ಜೆಎಂಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ನಿವಿನ್ ಕುರಿಯಾಕೋಸ್‌ರವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದು, ಕುರಿಯಕೋಸ್ ಪಿ.ಎ.ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here