






ಪುತ್ತೂರು: ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಬದ್ರಿಯಾ ಜುಮಾ ಮಸೀದಿ ಇದರ ನವೀಕರಣ ಕಾಮಗಾರಿಗೆ ವಕ್ಫ್ ಇಲಾಖೆಯಿಂದ 15 ಲಕ್ಷ ರೂ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಸದ್ರಿ ಮಸೀದಿಯಲ್ಲಿ ಹೆಚ್ಚಾಗಿ ಬಡ ಕುಟುಂಬದ ಸದಸ್ಯರೇ ಸಮಿತಿಯಲ್ಲಿ ಇದ್ದು, ಮಸೀದಿ ಕಟ್ಟಡ ನವೀಕರಣಕ್ಕೆ ಆರ್ಥಿಕ ವ್ಯವಸ್ಥೆ ಕ್ರೋಡೀಕರಣಕ್ಕೆ ಕಷ್ಟ ಸಾಧ್ಯವಾಗಿರುವ ಕಾರಣ ಇಲಾಖೆಯಿಂದ ಅನುದಾನ ನೀಡುವಂತೆ ವಕ್ಫ್ ಸಚಿವ ಜಮೀರ್ ಅಹ್ಮದ್ ರವರಲ್ಲಿ ಮನವಿ ಮಾಡಿದ್ದರು. ವಕ್ಫ್ ಇಲಾಖೆಯಿಂದ 15 ಲಕ್ಷ ರೂ ಬಿಡುಗಡೆಯಾಗಿದೆ.













