ಆಲಂತಾಯ ಶಾಲಾ ನೂತನ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ

0

ನೆಲ್ಯಾಡಿ: ಶತಮಾನೋತ್ಸವ ಆಚರಿಸಿಕೊಂಡಿರುವ ಕಡಬ ತಾಲೂಕಿನ ಆಲಂತಾಯ ಗ್ರಾಮದ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಗೆ ನವಮಂಗಳೂರು ಬಂದರು ಪ್ರಾಧಿಕಾರ (ಎನ್.ಎಂ.ಪಿ.ಎ.) ದಿಂದ ಮಂಜೂರು ಆಗಿರುವ 20 ಲಕ್ಷ ರೂ.ಅನುದಾನದಲ್ಲಿ ನೂತನ ಕೊಠಡಿ ನಿರ್ಮಾಣಕ್ಕೆ ಮಾ.12ರಂದು ಬೆಳಿಗ್ಗೆ ಶಿಲಾನ್ಯಾಸ ನೆರವೇರಿಸಲಾಯಿತು. ಅರ್ಚಕ ನಾಗರಾಜ್ ಮುಡಂಬಡಿತ್ತಾಯ ಅವರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೊಳೆಂಜಿರೋಡಿ ದವಳಗಿರಿ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್ ಮನೋಹರ್ ಕೆ.ಆರ್., ನಿವೃತ್ತ ಮುಖ್ಯಗುರು ಸಂಜೀವ ಪೂಜಾರಿ ಬಟ್ಲಡ್ಕ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಸಿ.ಬಿ., ಉಪಾಧ್ಯಕ್ಷೆ ಶಶಿಕಲಾ ಅಲಂಗಪ್ಪೆ, ಶಾಲಾ ಮುಖ್ಯಗುರು ಲವ್ಲಿಜೋಸ್, ಗೋಳಿತ್ತೊಟ್ಟು ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಸವಿತಾ ಆಲಂತಾಯ, ನಿಕಟಪೂರ್ವ ಸದಸ್ಯರಾದ ಪದ್ಮನಾಭ ಪೂಜಾರಿ, ಶಿವಪ್ರಸಾದ್ ಶಿವಾರು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಾಬು ಅಲಂಗಪ್ಪೆ, ಪೂರ್ವವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಪಾಲೇರಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಸದಸ್ಯ ನೀಲಪ್ಪ ನಾಯ್ಕ್ ಅಲಂಗಪ್ಪೆ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಸೇನೆರೆಕೆರೆ, ಎಸ್‌ಡಿಎಂಸಿ ಸದಸ್ಯರಾದ ಪದ್ಮನಾಭ ಎಸ್.ಪೆರ್ನಾರು, ಚಂದ್ರಶೇಖರ ಅಲಂಗಪ್ಪೆ, ಹರೀಶ ಸಿ.ಕೆ.ಚಿಲುಮೆ, ಆಶಾಲತಾ, ಲೀಲಾವತಿ ಅಲಂಗಪ್ಪೆ, ಪವಿತ್ರ ಪೆರ್ನಾರು, ಮಾಲಿನಿ, ಶಾಲಾ ಸಹಶಿಕ್ಷಕರಾದ ವರ್ಗೀಸ್ ಕೆ.ಪಿ., ರಮೇಶ್ ದೊಡವಾಡ, ದೀಕ್ಷಿತಾ ಪಿ.ಆರ್., ವಿನುತಾ ಪಿ., ಶಾಲಾ ವಿದ್ಯಾರ್ಥಿ ನಾಯಕಿ ಶ್ರೀಶ, ಸ್ಥಳೀಯ ಮುಖಂಡರಾದ ಬಾಲಕೃಷ್ಣ ಅಲಂಗಪ್ಪೆ, ರಮೇಶ್ ಪೆರ್ನಾಳಿಕೆ, ಭರತ್ ಅಲಂಗಪ್ಪೆ, ಚೇತನ್ ಶಿವಾರು, ಸೌಮ್ಯಲತಾ ಅಲಂಗಪ್ಪೆ, ಜಯಶೀಲಾ ಮರುವಂತಿಲ, ದಿಕ್ಷೀತಾ ಪೆರ್ನಾರು, ನಿರೀಕ್ಷಾ ಪೆರ್ನಾರು, ಸುನೀತಾ ನಿರಾಲಕೋಡಿ, ಅಂಗನವಾಡಿ ಸಹಾಯಕಿ ಸುನಂದಾ, ಶಾಲಾ ಅಡುಗೆ ಸಿಬ್ಬಂದಿಗಳಾದ ಲಲಿತಾ ಶಿವಾರು, ಭವಾನಿ ಸೇನೆರಕೆರೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here