ಸುದಾನ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಭಾಧ್ಯಕ್ಷತೆಯನ್ನುವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಮಾತನಾಡುತ್ತಾ ಜ್ಞಾನವೇ ನಿಜವಾದ ಸಂಪತ್ತು. ವಿದ್ಯಾರ್ಥಿಗಳು ವಿಸ್ತಾರವಾದ   ದೃಷ್ಟಿಯಿಂದ ಜ್ಞಾನಸಂಪಾದನೆಯಲ್ಲಿ ತೊಡಗಿಕೊಳ್ಳಬೇಕು. ತನ್ಮೂಲಕ ಸ್ವತಂತ್ರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಧಕರಾಗಿ ಎಂದು ಶುಭಹಾರೈಸಿದರು. ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಅವರುಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಹತ್ತನೇ ತರಗತಿಯ ಕಿರಿಯ ವಿದ್ಯಾರ್ಥಿಗಳಿಗೆ  ’ಕನಸು, ಪರಿಶ್ರಮ ಮತ್ತು ಜೀವನ ಮೌಲ್ಯಗಳನ್ನು ಬಿಡದೆ ಪಾಲಿಸಿ ಗೆಲುವು ಸಾಧಿಸುವುದು ಹೇಗೆ? ಎಂದು ತಿಳಿಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶೋಭನಾಗರಾಜ್ ಮಾತನಾಡುತ್ತಾ “ನಿಮ್ಮ ಆಸೆ-ಆಕಾಂಕ್ಷೆಗಳನ್ನು ಜೀವನದಲ್ಲಿ ಗುರಿಯನ್ನಾಗಿಸಿ ಬದಲಾಯಿಸಿಕೊಂಡು ಸೂಕ್ತವಾದ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಸುಲಭ ಎಂದು ನುಡಿದರು. ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡು ಕೃತಜ್ಞತೆಯನ್ನರ್ಪಿಸಿದರು.

ಶಾಲಾ ಆಡಳಿತ ಮಂಡಳಿಯ  ಕೋಶಾಧಿಕಾರಿ ಆಸ್ಕರ್ ಆನಂದ್, ಉಪಮುಖ್ಯ ಶಿಕ್ಷಕಿ ಲವಿನಾ ಹನ್ಸ್ ಸಂಯೋಜಕರಾದ ಪ್ರತಿಮಾ, ಗಾಯತ್ರಿ ಮತ್ತು ಅಮೃತವಾಣಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ’ಇನ್ ಪಾರ್ಮೇಶನ್ ಟೆಕ್ನಾಲಜಿ’ ಕೋರ್ಸಿನ ಪ್ರಮಾಣ ಪತ್ರವನ್ನು ಮತ್ತು ನೆನಪಿನ ಉಡುಗೂರೆಯನ್ನು ವಿತರಿಸಲಾಯಿತು. ಕಲಾ ಶಿಕ್ಷಕ ಸದಾಶಿವ ಭಟ್ ರವರು ಈ ಬಾರಿಯ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನೊಳಗೊಂಡ ಕವನ ಮಂಡಿಸುತ್ತಾ ಜೀವನ ಮೌಲ್ಯಗಳ ಸಂದೇಶಗಳೊಂದಿಗೆ ಯಶಸ್ಸಿಗಾಗಿ ಶುಭಹಾರೈಸಿದರು. ಅಮೃತವಾಣಿ ಶುಭಾಶಯಗಳೊಂದಿಗೆ ವಂದಿಸಿ ಸಹಶಿಕ್ಷಕರಾದ ಬಕುಲ ಹಾಗೂ ಡೈಸಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here