ಮರ್ದಾಳ: ಜೀಪು ಚಾಲಕ ಕುಂಞಿಮೊನ್ ನಿಧನ

0

ಮರ್ದಾಳ: ಐತ್ತೂರು ಗ್ರಾಮದ ಕೊಡೆಂಕಿರಿ ನಿವಾಸಿ, ಜೀಪು ಚಾಲಕ ಕುಂಞಿಮೊನ್(55ವ.)ರವರು ಅನಾರೋಗ್ಯದಿಂದ ಮಾ.13ರಂದು ಮುಂಜಾನೆ ನಿಧನರಾದರು.
ಮಧ್ಯರಾತ್ರಿ ಮನೆಯಲ್ಲಿ ಅಸ್ವಸ್ಥರಾದ ಕುಂಞಿಮೊನ್ ಅವರನ್ನು ರಾತ್ರಿ 2 ಗಂಟೆ ವೇಳೆಗೆ ಕಡಬ ಜೆಎಂಜೆ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟರೆಂದು ಎಂದು ವರದಿಯಾಗಿದೆ. ಸೌಮ್ಯ ಸ್ವಭಾವದ ಇವರು ಹಲವು ವರ್ಷಗಳಿಂದ ಮರ್ದಾಳ ಪರಿಸರದಲ್ಲಿ ಜೀಪು ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮರ್ದಾಳ ಜೀವನ್ ಜ್ಯೋತಿ ವಿಶೇಷ ಮಕ್ಕಳ ಶಾಲೆಯಲ್ಲೂ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ರಬ್ಬರ್ ಬೋರ್ಡ್‌ನಲ್ಲಿ ಉದ್ಯೋಗದಲ್ಲಿರುವ ಗ್ರೇಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಪುತ್ರ ಜಸ್ಟಿನ್ ಅವರನ್ನು ಅಗಲಿದ್ದಾರೆ. ಮೃತದೇಹವನ್ನು ಕಡಬ ಜೆಎಂಜೆ ಆಸ್ಪತ್ರೆಯಲ್ಲಿಡಲಾಗಿದ್ದು ಮಾ.೧೪ರಂದು ಪುತ್ರ ವಿದೇಶದಿಂದ ಆಗಮಿಸಿದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here