







ಪುತ್ತೂರು: ಮಾಜಿ ಸೈನಿಕರ ಸಂಘ ಪುತ್ತೂರು ಇದರ ವತಿಯಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಸರಕಾರದಿಂದ ಕೊಡಲ್ಪಡುವ ಉಚಿತ ಕಾನೂನು ಮಾಹಿತಿ ಶಿಬಿರ ವೀರ್ ಪರಿವಾರ್ ಸಹಾಯತಾ ಯೋಜನಾ, 2025 ಕಾರ್ಯಕ್ರಮವು ಮಾ.12ರಂದು ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ನಡೆಯಿತು.



ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಾಗೂ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ಯಾನಲ್ ಅಡ್ವಕೇಟ್ ಪ್ರತಿಮಾ ಎಸ್. ಬಂಗೇರ ಮಾತನಾಡಿ, ದೇಶ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸೈನಿಕರ ಹಿತರಕ್ಷಣೆ ಮತ್ತು ಅವರಿಗೆ ಕಾನೂನು ಭದ್ರತೆ ಒದಗಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಕಾನೂನು ಸೇವಾ ಪ್ರಾದೀಕಾರ ಶ್ಲಾಘನೀಯ ಹಜ್ಜೆಯನ್ನಿಟ್ಟಿದೆ. ಸೈನಿಕರು ತಮ್ಮ ನಿವೃತ್ತಿಯ ನಂತರವು ಕಾನೂನು ಸಂಘರ್ಷಗಳ ಸುಳಿಯ ಕಂಗೆಡಬಾರದು. ಸೇನೆಯ ಸಮವಸ್ತ್ರ ಕಳಚಿದ ಮೇಲೂ ಸೈನಿಕರಿಗೆ ಈ ನಾಡಿನ ಕಾನೂನು ವ್ಯವಸ್ಥೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಭರವಸೆಯನ್ನು ಕಾರ್ಯಾಗಾರದ ಮೂಲಕ ಮೂಡಿಸಲಾಗುತ್ತಿದೆ ಎಂದು ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ಬಿ. ವಾಸ್ತವಿಕವಾಗಿ ಮಾತನಾಡಿದರು. ರಮನಾಥ ರೈ ವಂದಿಸಿದರು. ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಅವರ ಕುಟುಂಬಸ್ಥರು ಶಿಬಿರದಲ್ಲಿ ಭಾಗವಹಿಸಿದ್ದರು.









