






ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ 2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಅನುರಾಗ ವಠಾರದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನಡೆಯಿತು.


ಗೌರವಾಧ್ಯಕ್ಷರಾಗಿ ನಿವೃತ್ತ ವಕೀಲ ಬಿ.ಪುರಂದರ ಭಟ್, ಕಾನೂನು ಸಲಹೆಗಾರರಾಗಿ ನೋಟರಿ ವಕೀಲ ದೇವಾನಂದ ಕೆ, ಗೌರವ ಸಲಹೆಗಾರರಾಗಿ ಸಂಜೀವ ನಾಯಕ್ ಕಲ್ಲೇಗ, ಸಲಹೆಗಾರರಾಗಿ ಕೆ.ಜಯರಾಮ ಕುಲಾಲ್, ಕಾರ್ಯಾಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಅವರು ಪುನರಾಯ್ಕೆಗೊಂಡಿದ್ದು, ಜಿಲ್ಲಾಧ್ಯಕ್ಷರಾಗಿ ವಿಲ್ಫ್ರೆಡ್ ಜೋನ್ ಲೋಬೊ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ್ವರ ನಾಯ್ಕ್ ಇರ್ದೆ ಅವರು ಆಯ್ಕೆಗೊಂಡಿದ್ದಾರೆ.



ಉಳಿದಂತೆ ಉಪಾಧ್ಯಕ್ಷರಾಗಿ ಮೋಹನ್ ಆಚಾರ್ಯ, ಈಶ್ವರ ನಾಯ್ಕ, ಚೆನ್ನಪ್ಪ ಮಚ್ಚಿಮಲೆ, ಮಾಯಿಲಪ್ಪ, ಕೋಶಾಧಿಕಾರಿಯಾಗಿ ರಾಮಚಂದ್ರ ಶೇವಿರೆ, ಜೊತೆ ಕಾರ್ಯದರ್ಶಿಯಾಗಿ ಜಗದೀಶ್ ಕೆ, ರಾಮಣ್ಣ ಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಈಶ್ವರ ನಾಯ್ಕ, ಪರಮೇಶ್ವರ ಮತ್ತು ಸದಸ್ಯರಾಗಿ ಶ್ರೀಧರ ಪೂಜಾರಿ, ದಿನೇಶ್, ಭಾಸ್ಕರ, ರಾಧಾಕೃಷ್ಣ ದಾರಂದಕುಕ್ಕು, ಮಹೇಶ್ ನಾಯ್ಕ, ಹರೀಶ, ಕೆ.ಯಚ್. ಮುಕುಂದ ಕೇಶವ, ಶ್ರೀನಿವಾಸ, ದೇವಪ್ಪ, ದೇವಾನಂದ ಶೆಟ್ಟಿಯವರು ಆಯ್ಕೆಗೊಂಡಿದ್ದಾರೆ.










