







ಪುಣಚ: ಇಲ್ಲಿನ ಬೈಲುಗುತ್ತು ಕುಟುಂಬಸ್ಥರ ಧರ್ಮದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ವಾರ್ಷಿಕ ನೇಮೋತ್ಸವ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳೊಂದಿಗೆ ಮಾ.24ರಿಂದ ಮಾ.26ರವರೆಗೆ ನಡೆಯಲಿದ್ದು ಇದರ ಗೊನೆಮುಹೂರ್ತ ಮಾ.19ರಂದು ಬೈಲುಗುತ್ತು ದೈವಸ್ಥಾನದ ಬಳಿ ನಡೆಯಿತು. ಆರಂಭದಲ್ಲಿ ಕುಟುಂಬದ ಯಜಮಾನ ಜಗನ್ನಾಥ ರೈ ಪ್ರಾರ್ಥನೆ ನೆರವೇರಿಸಿದರು. ಬಳಿಕ ದೈವದ ಪರಿಚಾರಕರು ಗೊನೆಮುಹೂರ್ತ ನೆರವೇರಿಸಿದರು. ಬೈಲುಗುತ್ತು ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.












