ಪರೀಕ್ಷೆಗೆ ಗೈರಾಗದಿರಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು ಪ್ರಾರಂಭದ ದಿನವೇ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ 40 ಮಂದಿ ಗೈರಾಗಿದ್ದು ,ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಯಾರೂ ಗೈರಾಗದಂತೆ ಶಾಸಕ ಅಶೋಕ್ ರೈ ವಿದ್ಯಾರ್ಥಿಗಳಲ್ಲಿ‌ ಮನವಿ ಮಾಡಿದ್ದಾರೆ.


ಎಸ್ಸೆಸ್ಸೆಲ್ಸಿ ಜೀವನದ ಮೊದಲ ಘಟ್ಟವಾಗಿದ್ದು ಅದರಲ್ಲಿ ಜಯಗಳಿಸುವ ಉತ್ಸುಕತೆ ನಮ್ಮಲ್ಲಿರಬೇಕು.‌ ಅನಗತ್ಯವಾಗಿ ಅಥವಾ ವಿನಾ ಕಾರಣ ಪರೀಕ್ಷೆಗೆ ಹಾಜರಾಗಿ ,ಮುಂದಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಬ್ಯಾಸ ಕಡ್ಡಾಯ ಎಂಬ ವಿಚಾರ ಬಂದರೂಬರಬಹುದು. ಆಗ‌ ಸಮಸ್ಯೆಯಾಗದಂತೆ ಈಗಲೇ ಎಚ್ಚರವಹಿಸಿ ಎಂದು ಶಾಸಕರು‌ ಮನವಿ ಮಾಡಿದರು.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಉಚಿತ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ‌. ಯಾವುದೇ ವ್ಯತ್ಯಯ ಉಂಟಾದಲ್ಲಿ ಶಾಸಕರ ಕಚೇರಿಗೆ ಮಾಹಿತಿ ನೀಡಿ ಎಂದು ಶಾಸಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here