






ಪುತ್ತೂರು: ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಬಜತ್ತೂರು ನಿವಾಸಿ ಚಂದ್ರಶೇಖರ ಪಾಲೆತ್ತಡಿ ಅವರ ಅತ್ತೆ ಪುಂಜಾಲಕಟ್ಟೆ ಕುಕ್ಕಳ ಗ್ರಾಮದ ಹೊಸಮನೆ ದಿ. ಉಗ್ಗಪ್ಪ ಗೌಡರ ಧರ್ಮಪತ್ನಿ ಸೇಸಮ್ಮ (84ವ) ಮಾ 19ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.


ನಾಟಿ ಔಷಧದ ಸೇವೆಯನ್ನು ಗ್ರಾಮೀಣ ಪರಿಸರದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿ ಜನಾನುರಾಗಿಯಾಗಿದ್ದ ಸೇಸಮ್ಮ ಅವರು ಜನಪರ ಸೇವೆ ಮಾಡುತಿದ್ದರು. ಇದಲ್ಲದೆ ಸಂಧಿ ಪಾಡ್ದನ ಮತ್ತು ಶೋಭಾನೆ ಹಾಡುಗಳ ಮೂಲಕವೂ ಅವರು ಪ್ರಸಿದ್ಧಿ ಪಡೆದಿದ್ದರು.



ಮೃತರು ಪುತ್ರರಾದ ವಸಂತ ಗೌಡ, ಗೋಪಾಲ ಗೌಡ, ಪುತ್ರಿಯರಾದ ಜಯಂತಿ, ವಾರಿಜಾ, ವಸಂತಿ ಮತ್ತು ಕುಸುಮ ಪಾಲೆತ್ತಾಡಿ. ಅಳಿಯಂದಿರಾದ ಮುತ್ತಪ್ಪ ಗೌಡ, ಪದ್ಮನಾಭ ಗೌಡ ಮತ್ತು ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಸೊಸೆಯಂದಿರಾದ ಪುಷ್ಪಲತಾ ಮತ್ತು ಸುಗುಣ, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.










