








ಉಪ್ಪಿನಂಗಡಿ: ಇಲ್ಲಿನ ಸೂರ್ಯ ಆಸ್ಪತ್ರೆಯ ಪ್ರಥಮ ವರ್ಷಾಚರಣೆಯ ಪ್ರಯುಕ್ತ ಉಪ್ಪಿನಂಗಡಿ ಜೆ.ಸಿ.ಐ., ರೋಟರಿ ಕ್ಲಬ್, ಹವ್ಯಕ ವಲಯ, ಐ.ಸಿ.ವೈ.ಯಂ, ಯುವವಾಹಿನಿ (ರಿ) ಉಪ್ಪಿನಂಗಡಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಘಟನೆಗಳ ಸಹಭಾಗಿತ್ವದಲ್ಲಿ ಪುತ್ತೂರಿನ ರೋಟರಿ ಕ್ಯಾಂಪ್ಕೊ ರಕ್ತನಿಧಿಯ ವತಿಯಿಂದ ಸೂರ್ಯ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ.ಕೆ.ಜಿ. ಭಟ್ ಉದ್ಘಾಟಿಸಿ ಮಾತನಾಡಿ, ರಕ್ತದಾನ ನಮ್ಮ ಜೀವನದ ಅತ್ಯಮೂಲ್ಯ ದಾನ. ಸ್ವಯಂ ಪ್ರೇರಣೆ ಮೂಲಕ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪರೋಪಕಾರವನ್ನು ಮಾಡುವಂತೆ ಹೇಳಿದರು.


ಕಾರ್ಯಕ್ರಮದಲ್ಲಿ ಸೂರ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್, ದಂತ ವೈದ್ಯ ಡಾ. ರಾಜಾರಾಮ ಕೆ.ಬಿ. ಮಾತನಾಡಿದರು. ಉಪ್ಪಿನಂಗಡಿಯ ಜೆ.ಸಿ.ಐ. ಅಧ್ಯಕ್ಷ ಅವನೀಶ್ ಸ್ವಾಗತಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ಸುಮಂತ್ ವಂದಿಸಿದರು.












