







ಉಪ್ಪಿನಂಗಡಿ: ಇಲ್ಲಿನ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಇದರ ವತಿಯಿಂದ ಪ್ರಾರಂಭಿಸಲಾದ ಜೆರಾಕ್ಸ್ ಹಾಗೂ ಅಂತರ್ಜಾಲ ಸೇವಾ ವಿಭಾಗದ ‘ಸೇವಾ ಸಿಂಧೂರ’ ಕೇಂದ್ರವನ್ನು ಮಾಜಿ ಶಾಸಕ, ಸಹಕಾರಿ ಧುರೀಣ ಸಂಜೀವ ಮಟಂದೂರು ರವರು ಮಂಗಳವಾರದಂದು ಉದ್ಘಾಟಿಸಿದರು.


ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಗ್ರಾಹಕ ವರ್ಗಕ್ಕೆ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಒದಗಿಸುವ ಸಲುವಾಗಿ ಸೇವಾ ಸಿಂಧು ವಿಭಾಗವನ್ನು ತೆರೆದಿರುವುದು ಸಂತಸದಾಯಕ ವಿದ್ಯಾಮಾನ. ಅದಕ್ಕೆ ಸಿಂಧೂರದ ಹೆಸರನ್ನು ಇಡುವ ಮೂಲಕ ರಾಷ್ಟ್ರಭಕ್ತಿಯನ್ನು ಉತ್ತೇಜಿಸಿದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಮಾತನಾಡಿ, ಗ್ರಾಹಕರ ಬೇಡಿಕೆಯ ಅನುಸಾರ ಈ ಸೇವಾ ಕೇಂದ್ರವನ್ನು ಸಂಸ್ಥೆಯು ಆರಂಭಿಸಿದೆ. ಗ್ರಾಹಕ ವರ್ಗದ ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ಸಂಘವು ವಿಸ್ತೃತ ಯೋಜನೆಗಳನ್ನು ಅನುಷ್ಠಾನಿಸಿದೆ ಎಂದರು.




ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಎಸ್., ನಿರ್ದೇಶಕರಾದ ರಾಜೇಶ್ ಮುಖಾರಿ, ವಸಂತ ಪಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ , ಬೆಳ್ಳಿಪ್ಪಾಡಿ ಪ್ರಕಾಶ್ ರೈ, ಶ್ರೀಮತಿ ಉಷಾ ಮುಳಿಯ, ಸಂಧ್ಯಾ, ಗೀತಾ, ರಾಘವ ನಾಯ್ಕ್, ಶ್ರೀರಾಮ ಪಾತಾಳ, ಸುಂದರ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಪೆಲಪ್ಪಾರು ವೆಂಕಟರಮಣ ಭಟ್, ಸುರೇಶ್ ಅತ್ರೆಮಜಲು, ಚಂದ್ರಶೇಖರ್ ತಾಳ್ತಜೆ, ಯಶವಂತ ಜಿ., ಕೆ.ವಿ. ಪ್ರಸಾದ್ , ಅಜೀಜ್ ಬಸ್ತಿಕಾರ್, ರವೀಂದ್ರ ಆಚಾರ್ಯ, ಡಾ. ಸುಪ್ರೀತ್ ಲೋಬೋ, ಶೌಕತ್ ಅಲಿ, ಹರೀಶ್, ಮುಕುಂದ ಗೌಡ, ರಮೇಶ್ ನಾಯ್ಕ , ಯತೀಶ್ ಶೆಟ್ಟಿ , ಜಯಂತ ಪೊರೋಳಿ, ಗಂಗಾಧರ ಪಿ. ಎನ್, ಪ್ರಶಾಂತ್ ಪೆರಿಯಡ್ಕ ಮೊದಲಾದವರು ಭಾಗವಹಿಸಿದ್ದರು.









