ಮಾ.27ರಂದು ಪುತ್ತೂರಿನಲ್ಲಿ ಅಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 8ನೇ ಶಾಖೆ ಶುಭಾರಂಭ

0

ಪುತ್ತೂರು: ಅಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 8ನೇ ಶಾಖೆ ಮಾ.27ರಂದು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಗೋಶನ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎ.ವಸಂತ ಕುಮಾರ್ ಕೆದಿಲಾಯ ಅವರು ಶಾಖೆ ಉದ್ಘಾಟಿಸಲಿದ್ದಾರೆ. ಈ ವೇಳೆ ಕಟ್ಟಡ ಮಾಲಕ ರೊನಾಲ್ಡ್ ವಿನ್ಸೆಂಟ್ ಬಾರೆಟ್ಟೋ, ಸೊಸೈಟಿಯ ಅಧ್ಯಕ್ಷ ಪ್ರಭಾಕರ ಗಾಣಿಗ, ಉಪಾಧ್ಯಕ್ಷ ಸಂತೋಷ್ ನಾಯ್ಕ್, ನಿರ್ದೇಶಕರಾದ ಕೆ.ಜೆ. ಪ್ರವೀಣ್, ದಿನಕರ್ ಕೆ., ಹರಿಪ್ರಸಾದ್ ಆರ್., ರವೀಂದ್ರನಾಥ ಉಡುಪ, ರಮಾ ಆರ್. ಉಡುಪ, ಈಶ್ವರ್ ಎಚ್.ಎಸ್., ವೆಂಕಟೇಶ್ ಹೆಬ್ಬಾರ್ ಉಪಸ್ಥಿತರಿರಲಿದ್ದಾರೆ.

ಉಡುಪಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಅಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕುಂದಾಪುರ, ಮೈಸೂರು, ಬೆಳ್ತಂಗಡಿ, ಬೀದರ್, ಬಾಳೆ ಹೊನ್ನೂರು ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಇದೀಗ 8 ನೇ ಶಾಖೆ ಪುತ್ತೂರಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು, ಸರ್ವಸದಸ್ಯರು, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here