







ಪುತ್ತೂರು: ಅಡುಗೆ ಅನಿಲ ಸಮಸ್ಯೆಯ ಬೆನ್ನಲ್ಲೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಒಲೆ ಆರಂಭಿಸಿದ ಬಳಿಕ ಭಕ್ತರು ಸೇವಾ ರೂಪದಲ್ಲಿ ಕಟ್ಟಿಗೆಯನ್ನೂ ಸಮರ್ಪಣೆ ಮಾಡುತ್ತಿದ್ದಾರೆ. ಮಾ.27ರಂದು ಸರ್ವೇಯರ್ ಮೋಹನ್ ಕೆ ಅವರು ಒಂದು ಟಿಪ್ಪರ್ ಕಟ್ಟಿಗೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು.


ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉಪಸ್ಥಿತರಿದ್ದರು.













