ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ಕಾರ್ಯದರ್ಶಿ ಈಶ್ವರ ಭಟ್ ಎಮ್.ರವರಿಗೆ ಬೀಳ್ಕೊಡುಗೆ

0

ಪುತ್ತೂರು: ದರ್ಬೆಯಲ್ಲಿ ವ್ಯವಹರಿಸುತ್ತಿರುವ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದಲ್ಲಿ ಕಳೆದ 37 ವರ್ಷಗಳಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಭಡ್ತಿ ಪಡೆದು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಮಾ.28ರಂದು ಸೇವಾ ನಿವೃತ್ತಿ ಹೊಂದಿದ ಈಶ್ವರ ಭಟ್ ಎಮ್.ರವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಂಘದ ಅಭಿವೃದ್ಧಿಗೆ ಈಶ್ವರ್ ಭಟ್‌ರವರ ಕೊಡುಗೆ ಅಪಾರ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಂಘದ ವತಿಯಿಂದ ಈಶ್ವರ ಭಟ್‌ರವರನ್ನು ಸನ್ಮಾನಿಸಿ ಮಾತನಾಡಿ ಸಹಕಾರಿ ಕ್ಷೇತ್ರ ಪವಿತ್ರವಾದ ಕ್ಷೇತ್ರ. ಸಂಘದ ಅಭಿವೃದ್ಧಿಗೆ ಈಶ್ವರ್ ಭಟ್‌ರವರ ಕೊಡುಗೆ ಅಪಾರ. ಅವರ ಸೇವೆಯನ್ನು ಪರಿಗಣಿಸಿ ಅವರನ್ನು ಮತ್ತೆ ಮುಂದುವರಿಸುವುದು ಉತ್ತಮ ಕೆಲಸ ಎಂದರು. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಬಗ್ಗೆ ನಬಾರ್ಡ್ ಸಿಜಿಮ್ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಈಶ್ವರ್ ಭಟ್‌ರವರತಹ ಕಾರ್ಯದರ್ಶಿಗಳ ಉತ್ತಮ ಕೆಲಸ. ತಾನು ಬೆಳೆದು ಬಂದ ದಾರಿಯುದ್ಧಕ್ಕೂ ಉದ್ಯೋಗದೊಂದಿಗೆ ಸಾಮಾಜಿಕ, ಹಲವು ಸಂಘಸಂಸ್ಥೆಗಳಲ್ಲಿಯೂ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಬೆಟ್ಟಂಪಾಡಿ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕಾರ್ಯಾಲಯದಲ್ಲಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ಈಶ್ವರ್ ಭಟ್‌ರವರು ಸದಾ ನಗುಮೊಗದ ವ್ಯಕ್ತಿ:
ಮುಖ್ಯ ಅತಿಥಿ, ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಮ್. ಮಾತನಾಡಿ ಈಶ್ವರ್ ಭಟ್‌ರವರು ಸದಾ ನಗುಮೊಗದ ವ್ಯಕ್ತಿ. ಇವರನ್ನು ಮತ್ತೆ ಸಂಘದಲ್ಲಿ ಮುಂದುವರಿಸುವುದು ಒಳ್ಳೆಯ ಕೆಲಸ ಎಂದ ಅವರು ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಹಾರೈಸಿದರು.

ಜೀವನವನ್ನು ಸಹಕಾರ ಸಂಘಕ್ಕೆ ಮೂಡಿಪಾಗಿಟ್ಟಿದ್ದರು:
ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಕೇಶವ ಅಮೈರವರು ಕೈಗಾರಿಕಾ ಸಂಘದ ವತಿಯಿಂದ ಹಾಗೂ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಮಾತನಾಡಿ ನಮ್ಮ ದೇಶದ ಪ್ರಗತಿಗೆ ಕಾರಣವಾದ ಆರ್ಥಿಕ ವ್ಯವಸ್ಥೆಗೆ ದ.ಕ ಜಿಲ್ಲೆಯ ಸಹಕಾರ ಸಂಘಗಳ ಕೊಡುಗೆಯೂ ಇದೆ. ಸಹಕಾರ ರಂಗದಲ್ಲಿ ಈಶ್ವರ್ ಭಟ್‌ರವರು ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದಾರೆ ಅವರು ಜೀವನವನ್ನು ಸಹಕಾರ ಸಂಘಕ್ಕೆ ಮೂಡಿಪಾಗಿಟ್ಟಿದ್ದರು ಎಂದು ಹೇಳಿ ಶುಭ ಹಾರೈಸಿದರು.

ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ
ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಡಾ| ಪಿ.ಕೆ.ಎಸ್. ಭಟ್ ಮಾತನಾಡಿ ನಾನು ೬ ವರ್ಷ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಿದೆ. ಸಂಘದಲ್ಲಿ ಹಲವು ಮಂದಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಈಶ್ವರ್ ಭಟ್‌ರವರು ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ಅರ್ಪಣಾ ಮನೋಭಾವನೆಯಿಂದ ಸಂಘವನ್ನು ಮುನ್ನಡೆಸಿದ್ದಾರೆ:
ಮೊನಾಕೊ ಹಣಕಾಸು ಯುನೈಟೆಡ್ ಫೆಡರೇಶನ್ ಆಫ್ ಟ್ರಾವೆಲ್ ಏಜಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ವಿಲಿಯಂ ಡಿಸೋಜ ಮಾತನಾಡಿ ನನಗೆ ಸಿಡ್ಕೋಗೆ ಬರುವುದು ಸಂತೋಷವಾಗುತ್ತಿದೆ. ಸಿಡ್ಕೋವನ್ನು ನಾವೆಲ್ಲರೂ ಸೇರಿ ಆರಂಭಿಸಿದ್ದೇವೆ. ಬಳಿಕ ಕೈಗಾರಿಕಾ ಪ್ರದೇಶ ಮಾಡಿದ್ದೇವೆ. ಈಶ್ವರ್ ಭಟ್‌ರವರು ಅರ್ಪಣಾ ಮನೋಭಾವನೆಯಿಂದ ಸಂಘವನ್ನು ಮುನ್ನಡೆಸಿದ್ದಾರೆ ಎಂದು ಹೇಳಿ ಸಂಘ ಅಭಿವೃದ್ಧಿ ಹೊಂದಲಿ ಎಂದರು.

ಕಾನೂನು ತಪ್ಪಿ ಹೋಗುವಂತಹ ವ್ಯಕ್ತಿ ಅಲ್ಲ:
ಅಧ್ಯಕ್ಷತೆ ವಹಿಸಿದ್ದ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಟಿ.ವಿ. ರವೀಂದ್ರನ್ ಮಾತನಾಡಿ ನಾನು ಸಾಮಾನ್ಯ ಸದಸ್ಯನಾಗಿ ಪ್ರಸ್ತುತ ಅಧ್ಯಕ್ಷನಾಗಿದ್ದೇನೆ. ಈಶ್ವರ ಭಟ್‌ರವರು ನಿಷ್ಠಾವಂತ ವ್ಯಕ್ತಿ. ಕಾನೂನು ತಪ್ಪಿ ಹೋಗುವಂತಹ ವ್ಯಕ್ತಿ ಅಲ್ಲ. ಅವರನ್ನು ಕಾನೂನಿನಲ್ಲಿ ಮುಂದುವರಿಸುವ ವ್ಯವಸ್ಥೆ ಇಲ್ಲ. ಆದುದರಿಂದ ಬೇರೆ ಹುದ್ದೆ ಕೊಟ್ಟು ಅವರನ್ನು ಮುಂದುವರೆಸುತ್ತಿದ್ದೇವೆ. ಅವರ ಸೇವೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಅವರ ರಕ್ತದಲ್ಲೂ ಸಿಡ್ಕೋ ಎಂಬ ಭಾವನೆ ಇತ್ತು:
ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅವರ ಜತೆ ಒಡನಾಟ ಹಲವು ವರ್ಷದಿಂದ ಇದೆ. ಅದನ್ನು ನೆನಪು ಮಾಡುವ ಸಂದರ್ಭ ಇವತ್ತು ಬಂದಿದೆ. ಸಿಡ್ಕೋ ಬಿಟ್ಟು ಬೇರೆ ಯಾವ ವಿಚಾರ ಅವರಲ್ಲಿ ಇರಲಿಲ್ಲ. ವೈಯುಕ್ತಿಕ ಕಾರಣಕ್ಕೂ ಆಫೀಸ್ ಬಿಟ್ಟು ಹೋಗ್ತಿರಲಿಲ್ಲ. ಅವರ ರಕ್ತದಲ್ಲೂ ಸಿಡ್ಕೋ ಎಂಬ ಭಾವನೆ ಇತ್ತು ಎಂದ ಅವರು ದಕ್ಷ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದ ಈಶ್ವರ ಭಟ್‌ರವರು ಸಂಘದ ದೊಡ್ಡ ಆಸ್ತಿ ಎಂದರು.

ತಾಳ್ಮೆ, ಪ್ರಾಮಾಣಿಕತೆ, ಪರಿಪೂರ್ಣತೆ ಅವರಲ್ಲಿತ್ತು:
ಸಂಘದ ಹಿರಿಯ ಗುಮಾಸ್ತ ರಘುನಾಥ್ ರೈ ಮಾತನಾಡಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಹಣದಿಂದ ಅಲ್ಲ. ಈಶ್ವರ ಭಟ್‌ರವರು ಮಾನವೀಯ ಮೌಲ್ಯ ಅಳವಡಿಸಿಕೊಂಡವರು. ತಾಳ್ಮೆ, ಪ್ರಾಮಾಣಿಕತೆ ಮತ್ತು ಪರಿಪೂರ್ಣತೆ ಅವರಲ್ಲಿತ್ತು. ಅವರ ನಡೆ ನುಡಿ ನಮಗೆ ಅನುಕರಣಿಯ ಎಂದು ಹೇಳಿ ವಂದಿಸಿದರು.

ನಿರ್ದೇಶಕರಾದ ಪದ್ಮಶ್ರೀ ಗರೀಶ್ ಭಾರದ್ವಾಜ್, ಮೋಹನ್ ಕುಮಾರ್ ಬೊಳ್ಳಾಡಿ, ರವಿರಾಜ್ ಭಟ್, ಸುಧೀರ್ ಶೆಟ್ಟಿ, ಕೇಶವ ಬಿ., ಡೆನ್ನಿಸ್ ಮಸ್ಕರೇನಸ್, ರಾಜೇಶ್ ಕೃಷ್ಣಪ್ರಸಾದ್ ಬಿ.ಎಸ್., ಮೀನಾಕ್ಷಿ ಮಂಜುನಾಥ್, ಮಹಾಲಕ್ಷ್ಮಿ, ಸುರೇಖ ಡಿ. ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶೌರಿ ಕೃಷ್ಣ ಪ್ರಾರ್ಥಿಸಿದರು. ನಿರ್ದೇಶಕ ಕೃಷ್ಣ ಮೋಹನ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಬಳಿಕ ಸಹಭೋಜನ ನಡೆಯಿತು.

ಸನ್ಮಾನ
ಪುತ್ತೂರು ಸುಳ್ಯ ಬೆಳ್ತಂಗಡಿ ಇಂಡಸ್ಟ್ರೀ ಮಾಲಕರು ಹಾಗೂ ಸಂಘದ ವತಿಯಿಂದ ಈಶ್ವರ್ ಭಟ್ ಎಂ. ಹಾಗೂ ಪತ್ನಿ ಶಾಂತ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪುತ್ತೂರು ಕೈಗಾರಿಕಾ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕೇಶವ ಅಮೈ ಮತ್ತು ಪದಾಧಿಕಾರಿಗಳು ಸದಸ್ಯರು ಈಶ್ವರ್ ಭಟ್ ಎಂ.ರವರನ್ನು ಸನ್ಮಾನಿಸಿದರು. ನಿರ್ದೇಶಕ ರವಿರಾಜ್ ಭಟ್ ಸನ್ಮಾನ ಪತ್ರ ವಾಚಿಸಿದರು.

ನಿಮ್ಮೆಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ“
ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ್ ಭಟ್ ಎಂ.ರವರು ನಿಮ್ಮೆಲ್ಲರ ಸಹಕಾರದಿಂದ ಗುಮಾಸ್ತನಾಗಿ ಬಳಿಕ 22 ವರ್ಷದಿಂದ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ರಾಜಕೀಯರಹಿತವಾದ ಆಡಳಿತ ಮಂಡಳಿಯ ಉತ್ತಮ ಕಾರ್ಯನಿರ್ವಹಣೆಯಿಂದ ಸಂಘ ಲಾಭ ಪಡೆಯಲು ಸಾಧ್ಯವಾಯಿತು. ನನ್ನ ಸೇವಾವಧಿಯಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬಂದಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದರು.

LEAVE A REPLY

Please enter your comment!
Please enter your name here