ಹೊಸ ಬೆಳಕು ಸೇವಾ ಟ್ರಸ್ಟ್‌ನಿಂದ ಎಂಡೋಸಲ್ಫಾನ್ ಪೀಡಿತ ಮಗುವಿಗೆ ಧನಸಹಾಯ: 59ನೇ ಯೋಜನೆಯಡಿ ಮಾನವೀಯತೆ ಮೆರೆದ ತಂಡ

0

ಪುತ್ತೂರು: ಸಮಾಜದ ಸಂಕಷ್ಟದಲ್ಲಿರುವ ಬಡವರ ಪಾಲಿಗೆ ಭರವಸೆಯ ಆಶಾಕಿರಣವಾಗಿ ಮೂಡಿಬಂದಿರುವ ‘ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ (ರಿ.) ಆರ್ಲಪದವು ಪಾಣಾಜೆ’, ತನ್ನ 59ನೇ ಯೋಜನೆಯ ಮೂಲಕ ಮತ್ತೊಂದು ಅರ್ಥಪೂರ್ಣ ಸಮಾಜಮುಖಿ ಕಾರ್ಯವನ್ನು ಪೂರೈಸಿದೆ.


ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿಗಳಾದ ಎಂಡೋಸಲ್ಫಾನ್ ಪೀಡಿತ 7 ವರ್ಷದ ಬಾಲಕಿ ದೀಕ್ಷಾ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಟ್ರಸ್ಟ್ ವತಿಯಿಂದ 18,000 ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು. ದಾನಿಗಳಿಂದ ಸಂಗ್ರಹಿಸಿದ ಈ ಮೊತ್ತವನ್ನು ಟ್ರಸ್ಟ್‌ನ ಪ್ರಮುಖರಾದ ಭಾಸ್ಕರ್ ಯಾದವ್ ದರ್ಭೆ ಹಾಗೂ ನವೀನ್ ನಗರ ಸಿಟಿಗುಡ್ಡೆ ಪುತ್ತೂರು ಅವರ ಸಮಕ್ಷಮದಲ್ಲಿ ಮಗುವಿನ ಹೆತ್ತವರಿಗೆ ನೀಡಿ ಸಾಂತ್ವನ ಹೇಳಲಾಯಿತು.


ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಟ್ರಸ್ಟ್ ಹಮ್ಮಿಕೊಂಡ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ದೀನದಲಿತರ ಮತ್ತು ರೋಗಿಗಳ ಸೇವೆಯೇ ಪರಮೋಚ್ಚ ಗುರಿ ಎಂದು ನಂಬಿರುವ ಹೊಸ ಬೆಳಕು ತಂಡವು ನಿರಂತರವಾಗಿ ಇಂತಹ ಸೇವಾ ಕಾರ್ಯಗಳ ಮೂಲಕ ಹಸಿದವರ ಹೊಟ್ಟೆ ತಣಿಸುವ ಹಾಗೂ ನೋವಿನಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಾ ಬಂದಿದೆ.


LEAVE A REPLY

Please enter your comment!
Please enter your name here