






ಪುತ್ತೂರು: ಶಾಸಕ ಅಶೋಕ್ ರೈ ಕಚೇರಿಯಲ್ಲಿ ಇಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ ಕಾರಣ ಒಂದು ಹಂತದಲ್ಲಿ ಜನರನ್ನು ನಿಯಂತ್ರಣ ಮಾಡುವುದೇ ಅಸಾಧ್ಯವಾಗಿ, ಕಚೇರಿಗೆ ಬಂದವರು ಸುಸ್ತಾಗದಿರಲಿ ಎಂದು ಶಾಸಕರು ತಂಪು ಪಾನೀಯ ವಿತರಿಸಿದ ಘಟನೆ ನಡೆದಿದೆ.






ಕಳೆದ ಮೂರು ವಾರಗಳಿಂದ ಅಧಿವೇಶನ ಇದ್ದ ಕಾರಣ ಶಾಸಕರು ಸಾರ್ವಜನಿಕರ ಬೇಟಿಗೆ ಸಿಕ್ಕಿರಲಿಲ್ಲ. ಪ್ರತೀ ಸೋಮವಾರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದು, ಈ ಬಾರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಅಸಾಧ್ಯವಾಗಿತ್ತು. ತನ್ನ ಭೇಟಿಗೆ ಬಂದವರಿಗೆ ತೊಂದರೆಯಾಗಬಾರದು ಎಂದು ಚಿಕ್ಕಿಯ ಜೊತೆಗೆ ತಂಪು ಪಾನೀಯವನ್ನು ವಿತರಣೆ ಮಾಡುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.










