







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಸಂಬಂಧಿಸಿ ಅಮ್ಯೂಸ್ಮೆಂಟ್ ಮೊದಲಾದ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯುವ ಸ್ಥಳ ಕಳೆದ ಬಾರಿ ಕೇವಲ 17.50ಲಕ್ಷಕ್ಕೆ ಹರಾಜಾಗಿದ್ದು, ಈ ಬಾರಿ ರೂ.66 ಲಕ್ಷ ರೂಪಾಯಿಗೆ ಹರಾಜಾಗಿದೆ. ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾಗಿದೆ.



ಏ.2ರಂದು ಸಣ್ಣ ಸಣ್ಣ ವ್ಯಾಪಾರಗಳಿಗೆ ಸ್ಥಳ ಹರಾಜು ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಸುಮಾರು 395 ಅಂಗಡಿಗಳ ಪೈಕಿ ಕೇವಲ 126 ಅಂಗಡಿಗಳು ಹರಾಜಾಗದೆ ಬಾಕಿಯಾಗಿತ್ತು. ಎ.3ರಂದು ಅಮ್ಯೂಸ್ಮೆಂಟ್ ಮೊದಲಾದ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುವ ಸ್ಥಳ ಹರಾಜು ಪ್ರಕ್ರಿಯೆ ನಡೆಯಿತು. ಇಎಮ್ಡಿ ಮೊತ್ತ ರೂ.50ಸಾವಿರ ಪಾವತಿ ಮಾಡಿದವರಿಗೆ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಹಲವಾರು ಮಂದಿ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ನವೀನ್ಚಂದ್ರ ನಾಕ್ ಬೆದ್ರಾಳ ಅವರು ರೂ.66ಲಕ್ಷ ಕ್ಕೆ ಹರಾಜಿನಲ್ಲಿ ಸ್ಥಳ ಪಡೆದುಕೊಂಡಿದ್ದಾರೆ. 2ನೇ ಬಿಡ್ಡುದಾರರಾಗಿ ರಾಕೇಶ್ ನಾಕ್ ಪರ್ಲಡ್ಕ ಅವರು ಪಾಲ್ಗೊಂಡಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಗಿರೀಶ್ ಕುಮಾರ್ ಸಹಿತ ಹಲವಾರು ಮಂದಿ ಏಲಂ ಪ್ರಕ್ರಿಯೆ ನಡೆಸಿದರು.












