







ಪುತ್ತೂರು: ಶಾಸಕನಾಗಿ ಎರಡು ವರ್ಷದ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಮಾನ ಪ್ರಮಾಣದಲ್ಲಿ ಅನುದಾನವನ್ನು ಹಂಚಿಕೆ ಮಾಡಿದ್ದೇನೆ, ಎಲ್ಲೂ ತಾರತಮ್ಯ ಮಾಡಿಲ್ಲ, ರಾಜಕೀಯ ಮಾಡಿಲ್ಲ. ಜನರ ಬೇಡಿಕೆ ಏನೊತ್ತೋ ಅವುಗಳಲ್ಲಿ ಬಹುಪಾಲು ಕಾಮಗಾರಿಗಳನ್ನು ಈಡೇರಿಸಿದ್ದೇನೆ. ಅನುದಾನದೊಂದಿಗೆ ಪ್ರತೀ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಅಭಿವೃದ್ದಿ ಕೆಲಸ ಮಾಡಿ ಆ ಬಳಿಕ ಜನರ ಬಳಿ ಮತ್ತೆ ಆಶೀರ್ವಾದ ಕೇಳುವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಪೆರ್ನೆ ಗ್ರಾಪಂ ವ್ಯಾಪ್ತಿಯ ಬಿಳಿಯೂರು ಹಾಗೂ ಪೆರ್ನೆ ಗ್ರಾಮದ 21 ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪೆರ್ನೆ ಗ್ರಾಮದ ಇತಿಹಾಸದಲ್ಲೇ ಇಷ್ಟೊಂದು ಮೊತ್ತದ ಅನುದಾನ ಬಂದಿಲ್ಲ. ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡದೆ ಅಗತ್ಯ ಬೇಡಿಕೆ ಇದ್ದ ಕಡೆಗಳಿಗೆ ಅನುದಾನವನ್ನು ಇಡಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕವೇ ನಾವು ಶಿಲಾನ್ಯಾಸ ಮಾಡುವುದು, ಸುಮ್ಮನೆ ತೆಂಗಿನ ಕಾಯಿ ಒಡೆದುಹೋಗುವ ಜಾಯಾಮಾನ ನಮ್ಮದಲ್ಲ ಎಂದು ಹೇಳಿದರು.



ಪ್ರಥಮ ಬಾರಿ ಅನುದಾನ ಪಡೆದಿದ್ದಾರೆ:
ಇವತ್ತು ಶಿಲಾನ್ಯಾಸ ಮಾಡಿದ ಕಾಮಗಾರಿಗಳ ಪೈಕಿ ಕೆಲವೊಂದು ಕಡೆಗಳಿಗೆ ಇಷ್ಟು ವರ್ಷದಲ್ಲಿ ಪ್ರಥಮ ಅನುದಾನ ದೊರಕಿದೆ. ಕೊಡತ್ತಾಯ ವ್ಯಾಘ್ರಚಾಮುಂಡಿ ದೈವಸ್ಥಾನ, ಕಾರ್ಲ ಕೊರಗಜ್ಜ ಕ್ಷೇತ್ರ, ಶ್ರೀರಾಮ ಭಜನಾಮಂದಿರ, ಕಡಂಬು ಮಸೀದಿ ರಸ್ತೆಗೆ ಪ್ರಥಮ ಬಾರಿಗೆ ಅನುದಾನ ದೊರಕಿದೆ. ಇಷ್ಟು ವರ್ಷ ಇವರಿಗೆ ಯಾರೂ ಅನುದಾನ ಕೊಟ್ಟಿರಲಿಲ್ಲ. ಜನರ ಬಹುಕಾಲ ಬೇಡಿಕೆ ಏನಿತ್ತೋ ಅದಕ್ಕೆ ಮನ್ನಣೆ ನೀಡುವ ಕೆಲಸವನ್ನು ಮಾಡಿದ್ದೇವೆ ಎಂದು ಶಾಸಕರು ಹೇಳಿದರು.
ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ಇದೆ
ಮುಂದಿನ ಬಾರಿ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ಇದೆ. ಜನರ ಬೇಡಿಕೆ ಈಡೇರಿಸಿದ ತೃಪ್ತಿ ನನ್ನಲ್ಲಿದೆ ಎಂದ ಶಾಸಕರು ಅನುದಾನ ಇಡುವಲ್ಲಿ ಕಾಂಗ್ರೆಸ್ -ಬಿಜೆಪಿ ಎಂಬ ರಾಜಕೀಯ ಲೆಕ್ಕಾಚಾರ ಮಾಡಿಲ್ಲ. ಜನ ಅಭಿವೃದ್ದಿಯನ್ನು ಇಷ್ಟಪಡುತ್ತಾರೆ. ಅಭಿವೃದ್ಧಿಯಾಗದೇ ಇದ್ದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಗ್ರಾಮದ ಕಟ್ಟಕಡೇಯ ವ್ಯಕ್ತಿ ನಡೆದಾಡುವ ರಸ್ತೆಯೂ ಅಭಿವೃದ್ದಿಯಾಗಬೇಕು ಎಂಬುದು ನನ್ನ ಕನಸು ಇದೇ ಕಾರಣಕ್ಕೆ ರಸ್ತೆಗೆ ಮೊದಲ ಆದ್ಯತೆಯನ್ನು ನೀಡುತ್ತಿದ್ದೇನೆ.
ಕಾಮಗಾರಿ ನೋಡಿಕೊಳ್ಳಿ
ಕಾಮಗಾರಿ ನಡೆಯುವ ವೇಳೆ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವ ರೀತಿ ರಸ್ತೆ ಬೇಕೋ, ಎಲ್ಲಿಂದ ಎಲ್ಲಿಗೆ ರಸ್ತೆ ಅಗತ್ಯವಾಗಿ ಬೇಕೋ ಅದೇ ರೀತಿ ಮಾಡಿಕೊಳ್ಳಬೇಕು.ಜನರ ದುಡ್ಡನ್ನೇ ಜನರಿಗೆ ಬಳಕೆ ಮಾಡುತ್ತಿದ್ದೇವೆ ಎಂದು ಶಾಸಕರು ತಿಳಿಸಿದರು.
ಪಂಚ ಗ್ಯಾರಂಟಿಯಿಂದ ಜನರಿಗೆ ಸಮಾಧಾನ
ದೇಶದಲ್ಲಿ ಸಿಲಿಂಡರ್ ಸಿಗುತ್ತಿಲ್ಲ, ಇಂಧನ ಬೆಲೆ ಏರಿಕೆಯಾಗಿದೆ, ಅಗತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ ಇದು ಕರ್ನಾಟಕದ ಜನರಿಗೆ ಅಷ್ಟೊಂದು ಕಷ್ಟವನ್ನು ನೀಡದೇ ಇರಲು ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಕಾರಣವಾಗಿದೆ. ಪಂಚ ಗ್ಯಾರಂಟಿ ಇಲ್ಲದೇ ಇರುತ್ತಿದ್ದರೆ ನಾವು ನೀವೆಲ್ಲಾ ಇಂದು ತಿನ್ನುವ ಅನ್ನಕ್ಕೂ ಪರದಾಡಬೇಕಾದ ಸ್ಥಿತಿ ಉಂಟಾಗುತ್ತಿತ್ತು. ಗ್ಯಾಸ್ ಇಲ್ಲದೆ ಹೊಟೇಲ್ ಉದ್ಯಮ, ರಿಕ್ಷಾ ಚಾಲಕರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರಕಾರ ಈ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಿ ದೇಶದಲ್ಲಿ ತಲೆದೋರಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಶಾಶಕರು ಹೇಳಿದರು.
ಶಾಸಕ ಅಶೋಕ್ ರೈ ಕೈ ಗಟ್ಟಿಗೊಳಿಸಿ: ಯು ಟಿ ತೌಸೀಫ್
ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್ರವರು ಮಾತನಾಡಿ ಪೆರ್ನೆ, ಬಿಳಿಯೂರು ಗ್ರಾಮದ ಇತಿಹಾಸದಲ್ಲೇ ಇಷ್ಟೊಂದು ಅನುದಾನ ಬಂದಿಲ್ಲ, ಗ್ರಾಮದ ಕಟ್ಟಕಡೇಯ ರಸ್ತೆಗೆ ಅನುದಾನ ಒದಗಿಸುವ ಮೂಲಕ ಶಾಸಕರು ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ, ಮುಂದಿನ ಚುನಾವಣೆಯಲ್ಲಿ ಗ್ರಾಮಸ್ಥರು ಅವರ ಕೈ ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು. ಮುಂಬರುವ ಗ್ರಾಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ಮತ್ತು ಆಶೀರ್ವಾದ ಮಾಡಬೇಕು ಎಂದು ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್ ಮನವಿ ಮಾಡಿದರು.
ಅಶೋಕ್ ರೈ ಶಾಸಕರಾದ ಬಳಿಕ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಗಳೂ ಅಭಿವೃದ್ದಿಯಾಗಿದೆ.ಎರಡೂ ವರೆ ವರ್ಷದಲ್ಲಿ ಕನಿಷ್ಟ 5 ಕೋಟಿಗೂ ಮಿಕ್ಕಿ ಅನುದಾನ ಬಹುತೇಕ ಗ್ರಾಮಗಳಿಗೆ ನೀಡಿದ್ದಾರೆ. ಇದರ ಜೊತೆಗೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿರುವುದು ಪುತ್ತೂರಿನ ಗೌರವವನ್ನು ಹೆಚ್ಚಿಸಿದೆ ಎಂದು ಹೇಳಿದರು.ಶಾಸಕರು ಮಾಡುವ ಅಭಿವೃದ್ದಿ ಕೆಲಸಗಳನ್ನು ಪ್ರತೀ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ನಾಯಕರು ಮಾಡಬೇಕು ಎಂದು ಮನವಿ ಮಾಡಿದರು.
ಪಂಚ ಗ್ಯಾರಂಟಿಯಿಂದ ಅಭಿವೃದ್ದಿಗೆ ಹಿನ್ನಡೆಯಾಗಿಲ್ಲ: ಉಮಾನಾಥ ಶೆಟ್ಟಿ
ಪಂಚ ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿಗೆ ಯಾವುದೇ ಹಿನ್ನಡೆಯಾಗಿಲ್ಲ, ಪ್ರತೀ ಗ್ರಾಮದಲ್ಲೂ ಅಭಿವೃದ್ದಿ ಕೆಲಸಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪೆರ್ನೆ ಗ್ರಾಮಕ್ಕೆ ಎರಡು ವರ್ಷದಲ್ಲಿ 6 ಕೋಟಿ ಅನುದಾನ ಬಂದಿದೆ, ಇಲ್ಲಿ ಇದುವರೆಗೂ ಆಗದ ಕೆಲಸಗಳು ಶಾಸಕರಿಂದ ಆಗಿದೆ ಅಂದ್ರೆ ಶಾಸಕರ ಅಭಿವೃದ್ದಿ ಇಚ್ಚಾಶಕ್ತಿಯೇ ಕಾರಣವಾಗಿದೆ. ಕೇವಲ ಭಾಷಣ ಮಾಡಿದ್ರೆ ಗ್ರಾಮ ಉದ್ದಾರವಾಗುವುದಿಲ್ಲ, ಅಭಿವೃದ್ದಿ ಕೆಲಸ ಮಾಡಿದರೆ ಮಾತ್ರ ಗ್ರಾಮಗಳ ಉದ್ದಾರವಾಗುತ್ತದೆ ಎಂಬುದನ್ನು ಪ್ರತೀಯೊಬ್ಬ ಗ್ರಾಮಸ್ಥರು ಅರಿತುಕೊಳ್ಳಬೇಕು ಎಂದು ಪಂಚ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಹೇಳಿದರು.
ಇನ್ನೂ 4 ಕೋಟಿ ಕೊಡುವುದಾಗಿ ಹೇಳಿದ್ದಾರೆ: ಫಾರೂಕ್ ಪೆರ್ನೆ
ಪೆರ್ನೆ ಗ್ರಾಮಕ್ಕೆ ಎರಡು ವರ್ಷದಲ್ಲಿ 6.48 ಕೋಟಿ ನೀಡಿದ್ದು ಇನ್ನೂ ನಾಲ್ಕು ಕೋಟಿ ಅನುದಾನ ನೀಡುವುದಾಗಿ ಶಾಸಕ ಅಶೋಕ್ ರೈ ಹೇಳಿದ್ದು ಇದಕ್ಕೆ ಅವರಿಗೆ ಅಭಿನಂಧನೆ ಸಲ್ಲಿಸುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಹೇಳಿದರು. ನಾಲ್ಕು ಕೋಟಿ ಅನುದಾನ ಮುಂದಿನ ದಿನಗಳಲ್ಲಿ ಬರುವುದರ ಜೊತೆಗೆ ಈ ಗ್ರಾಮದ ಬಹುತೇಕ ರಸ್ತೆ ಬೇಡಿಕೆ ಈಡೇರಲಿದೆ. ಗ್ರಾಮದ ಅಭಿವೃದ್ದಿಗೆ ಕಾರಣ ಕರ್ತರಾದ ಶಾಸಕರನ್ನು ನಾವು ಮರೆಯಬಾರದು ಅವರ ಕೈ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೆತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ರಾಜ್ಯ ಎನ್ ಎಸ್ ಯು ಐ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ವಲಯಾಧ್ಯಕ್ಷರಾದ ಅಬ್ದುಲ್ ಶಾಫಿ ಬೂತ್ ಅಧ್ಯಕ್ಷರುಗಳಾದ ಉಮೇಶ, ಮ್ಯಾಕ್ಷಿಂ ಲೋಬೋ.ಪುಷ್ಕರ ಪೂಜಾರಿ, ಮಿತ್ರದಾಸ ರೈ, ಸುನಿಲ್ ನೆಲ್ಸನ್ ಡಿಸೋಜಾ, ತನಿಯಪ್ಪ ಪೂಜಾರಿ,ಗಣೇಶ್ ರಾಜ್ ರೈ, ಅಬ್ದುಲ್ ಬಶೀರ್, ಅಬ್ದುಲ್ ರಝಾಕ್, ಕಿರಣ್ ಶೆಟ್ಟಿ, ಗಿರಿಶ್ ಪೆರ್ಗಡೆ, ಕೊರಗು, ತೋಯಿಜಾಕ್ಷ ಶೆಟ್ಟಿ, ವಿಜಯಾ, ಗಿರಿಜಾ ಪೆರ್ನೆ,ಸದಾಶಿವ ಶೆಟ್ಟಿ ಬಿಳಿಯೂರು, ಇಬ್ರಾಹಿಂ ಪಲ್ಲತ್ತಾರು, ಗಿರೀಶ್ ರಾವ್ ದೇನ್ಲಡ್ಕ,ಗ್ರಾಪಂ ಸದಸ್ಯೆ ನಳಿನಿ, ವನಿತಾ ಪೆರ್ನೆ, ಭಾರತಿ ಪೆರ್ನೆ, ನರಸಿಂಹ ನಾಯಕ್,ವಿಶ್ವನಾಥ ಶೆಟ್ಟಿ ಪೆರ್ನೆ, ಸೀತಾರಾಮ ಶೆಟ್ಟಿ ಇರುಬೈಲು, ಸುಂಧರ ಮಲ್ಲಡ್ಕ, ರಾಜಗೋಪಾಲ್ ಶೆಟ್ಟಿ, ಡಾ. ರಾಜಗೋಪಾಲ ಶರ್ಮ ಸೇರಿದಂತೆ ಪಕ್ಷದ ಕಾರ್ಯಕರ್ತರು, ಫಲಾನುಭವಿಗಳು ಇದ್ದರು.
ಬಿಳಿಯೂರು ಹಾಗೂ ಪೆರ್ನೆ ಗ್ರಾಮದಲ್ಲಿ ಶಿಲಾನ್ಯಾಸಗೊಂಡ ಕಾಮಗಾರಿಗಳ ವಿವರ:
ಪೆರ್ನೆ ಗ್ರಾಪಂ ವ್ಯಾಪ್ತಿಯ ಬಿಳಿಯೂರು ಗ್ರಾಮದ ಬಡಕ್ಕೋಡಿ -ನಾಡಾಳಿ ರಸ್ತೆ ಅಭಿವೃದ್ದಿಗೆ 10 ಲಕ್ಷ ರೂ ಅನುದಾನ

ಬಿಳಿಯೂರು ಕೋಡ್ಲೆ ಮಾಡತ್ತಾರು ಸಂಪರ್ಕ ರಸ್ತೆ ಕಾಂಕ್ರೀಟ್ ಹಾಗೂ ಇದೇ ರಸ್ತೆಯ ಸೇತುವೆ ನಿರ್ಮಾಣಕ್ಕೆ 15 ಲಕ್ಷ ರೂ ಅನುದಾನ

ಬಿಳಿಯೂರು ಗ್ರಾಮದ ಖಾನ ರಸ್ತೆ ಕಾಂಕ್ರೀಟ್ಗೆ 10 ಲಕ್ಷ ರೂ ಅನುದಾನ

ಬಿಳಿಯೂರು ಗ್ರಾಮದ ಬಿಳಿಯೂರು ಹೊಳೆಬದಿ ರಸ್ತೆ ಕಾಂಕ್ರೀಟ್ಗೆ 10 ಲಕ್ಷ ರೂ ಅನುದಾನ

ಬಿಳಿಯೂರು ಗ್ರಾಮದ ಕೊಂಡೆಚ್ಚಡ್ಕ ರಸ್ತೆ ಅಭಿವೃದ್ದಿಗೆ 5.5 ಲಕ್ಷ ರೂ ಅನುದಾನ

ಬಿಳಿಯೂರು ಗ್ರಾಮದ ಅಣೆಕಟ್ಟು ರಸ್ತೆ ಉದ್ಘಾಟನೆ ಹಾಗೂ 5 ಲಕ್ಷ ರೂ ಕಾಮಗಾರಿಗೆ ಶಿಲಾನ್ಯಾಸ

ಬಿಳಿಯೂರು ಗ್ರಾಮದ ಪಲ್ಲತ್ತಾರು ಇಬ್ರಾಹಿಂ ಎಂಬವರ ಮನೆಯ ಬಳಿಯಿಂದ ರಸ್ತೆ ಅಭಿವ್ರದ್ದಿಗೆ 5.5 ಲಕ್ಷ ರೂ ಅನುದಾನ

ಬಿಳಿಯೂರು ಗ್ರಾಮದ ಕಳೆಂಜ ಕೆಳಗಿನ ಮನೆ ರಸ್ತೆ ಅಭಿವೃದ್ದಿಗೆ 5.5 ಲಕ್ಷ ರೂ ಅನುದಾನ

ಪೆರ್ನೆ ಗ್ರಾಪಂನ ಘನ ತ್ಯಾಜ್ಯ ಘಟಕಕ್ಕೆ ತೆರಳುವ ರಸ್ತೆ ಕಾಂಕ್ರೀಟ್ಗೆ 5 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ವಿವೇಕಾನಂದ ವಿಶ್ವಸ್ಥ ಮಂಡಳಿ ಶ್ರೀರಾಮ ಭಜನಾಮಂದಿರದ ಅಭಿವೃದ್ದಿಗೆ 5 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಪಲ್ಲತ್ತಾರಿನಿಂದ ದರ್ಖಾಸು ಹೊಳೆಬದಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಕಡಂಬು ಜುಮಾ ಮಸೀದಿ ರಸ್ತೆ ಕಾಂಕ್ರೀಟ್ಗೆ 5 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಕೋಡಿಗೆ ರಸ್ತೆ ಅಭಿವೃದ್ದಿಗೆ 5 ಲಕ್ಷ ರೂ ಅನುದಾನ

ಸಪರಿವಾರ ಕೊರತಿಕಟ್ಟೆ ಮಾಡತ್ತಾರು ವ್ಯಾಘ್ರಚಾಮುಂಡಿ ದೈವಸ್ಥಾನದ ಅಭಿವೃದ್ದಿಗೆ 5 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಹನುಮಾಜೆ ರುಧ್ರಭೂಮಿ ರಸ್ತೆ ಅಭಿವೃದ್ದಿಗೆ 5 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಕಾರ್ಲ ಸರಕಾರಿ ಹಿ ಪ್ರಾ ಶಾಲಾ ನೂತನ ಆಟದ ಮೈದಾನ ಉದ್ಘಾಟನೆ

ಶ್ರೀ ಆದಿಮೊಗೆರ್ಕಳ , ಕೊರಗಜ್ಜ ಕ್ಷೇತ್ರ ಕಾರ್ಲ ಇದರ ಅಭಿವೃದ್ದಿಗೆ 4 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಪಾಲೆದಕೋಡಿ ಕಟ್ಟತ್ತಾರು ರಸ್ತೆ ಅಭಿವೃದ್ದಿಗೆ 1.00 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ನೆಕ್ಕರೆ ಕೋಡಿಯಡ್ಕ ಬಲತೋಟ ರಸ್ತೆ ಅಭಿವೃದ್ದಿಗೆ 10 ಲಕ್ಷ ರೂ ಅನುದಾನ

ಪೆರ್ನೆ ಗ್ರಾಮದ ಪುರಿಯ ರಸ್ತೆ ಅಭಿವೃದ್ದಿಗೆ 5 ಲಕ್ಷ ರೂ ಅನುದಾನದಲ್ಲಿ ಶಿಲಾನ್ಯಾಸ










