ಪುತ್ತೂರು ಜಾತ್ರೆ; ದೇವಳದ ವಠಾರದಲ್ಲಿ ಅಪರಾಧಗಳನ್ನು ಮಾಡಿದ ಅಪರಾಧಿಗಳಿಗೆ ಜಾಮೀನು ನೀಡದಂತೆ ವಕೀಲರ ಸಂಘಕ್ಕೆ ಮನವಿ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂದರ್ಭ ದೇವಳದ ವಠಾರದಲ್ಲಿ ಅಪರಾಧಗಳನ್ನು ಮಾಡಿದದ ಅಪರಾಧಿಗಳಿಗೆ ಜಾಮೀನು ನೀಡದಂತೆ ಪುತ್ತೂರು ದೇವಳದ ಆಡಳಿತ ಮಂಡಳಿ ವಕೀಲರ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.


ಎ.10ರಿಂದ ಎ.20ರ ತನಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಜಾತ್ರೋತ್ಸವ ಯಶಸ್ವಿಯಾಗಿ ನಡೆಯುವ ಹಿತದೃಷ್ಟಿಯಿಂದ ದೇವಳದ ವಠಾರದಲ್ಲಿ ಯಾವುದೇ ಗಲಾಟೆ, ಕಳ್ಳತನ, ಅಹಿತಕರ ಘಟನೆಯಿಂದ ಬಂಧನಕ್ಕೊಳಗಾದ ಅಪರಾಧಿಗಳಿಗೆ ಎ.೨೦ರ ಒಳಗೆ ಜಾಮೀನು ನೀಡಿ ಬಿಡುಗಡೆಗೊಳಿಸುವಲ್ಲಿ ವಾದ ಮಾಡದೆ ದೇವಳದ ಜಾತ್ರೋತ್ಸವದ ಯಶಸ್ವಿಗೆ ಸಹಕರಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ನೀಡುವ ಸಂದರ್ಭ ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here