ಕಲ್ಲೇರಿಯಲ್ಲಿ ಕ್ರೈನ್ ಡಿಕ್ಕಿ – ಕೊಳ್ತಿಗೆಯ ವ್ಯಕ್ತಿ ಮೃತ್ಯು

0

ಪುತ್ತೂರು: ರಸ್ತೆ ಬದಿ ನಿಂತಿದ್ದ ಕೊಳ್ತಿಗೆಯ ವ್ಯಕ್ತಿಯೊಬ್ಬರಿಗೆ ಕ್ರೈನ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಲ್ಲೇರಿಯಲ್ಲಿ ಎ.7ರಂದು ನಡೆದ ಬಗ್ಗೆ ವರದಿಯಾಗಿದೆ.

ಕೊಳ್ತಿಗೆ ನಿವಾಸಿ ಮಹಾಲಿಂಗಮ್(50ವ) ಎಂಬವರು ಮೃತಪಟ್ಟವರು. ಅವರ ಜೋಗಿಬೆಟ್ಟು ಮಗಳ ಮನೆಗೆ ಬಂದವರು ಕಲ್ಲೇರಿ ಪ್ರಯಾಣಿಕರ ಬಸ್ ತಂಗುದಾಣದ ಬಳಿ ನಿಂತಿದ್ದರು.

ಈ ವೇಳೆ ಗುರುವಾಯನಕರೆಯಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಕ್ರೈನ್ ಅವರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಮಹಾಲಿಂಗಮ್ ಅವರು ರಸ್ತೆಗೆ ಬಿದ್ದಾಗ ಅವರ ತಲೆಯ ಮೇಲೆ ಕ್ರೈನ್ ಚಕ್ರ ಹರಿದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here