ಗೋ ಗ್ಯಾಸ್‌ನಲ್ಲಿ ರೂ.100ಕ್ಕೆ ಅಟೋ ಗ್ಯಾಸ್ ನೀಡಲು ಒಪ್ಪಿಗೆ

0

ಪುತ್ತೂರು:ಪುತ್ತೂರಿನಲ್ಲಿರುವ ಗೋ ಗ್ಯಾಸ್ ಸಂಸ್ಥೆಯವರು 120ರ ಬದಲಿಗೆ ರೂ.100ರ ದರದಲ್ಲಿ ಅಟೋ ಗ್ಯಾಸ್ ನೀಡಲು ಮುಂದಾಗಿದ್ದಾರೆ.


ಆಟೋ ಗ್ಯಾಸ್ ಅಧಿಕ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಏ.6ರಂದು ಪುತ್ತೂರಿನಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದರು.ಪುತ್ತೂರಿನಲ್ಲಿರುವ ಬೇರೆ ಗ್ಯಾಸ್ ಪಂಪ್‌ಗಳಲ್ಲಿ 92 ರೂಗೆ ಗ್ಯಾಸ್ ನೀಡಿದರೆ ಗೋಗ್ಯಾಸ್ ಮಾತ್ರ 120 ರೂ ದರ ನಿಗದಿ ಮಾಡಿತ್ತು.ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಗೋ ಗ್ಯಾಸ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.ಪ್ರತಿಭಟನಾ ನಿರತ ಆಟೋ ಚಾಲಕರು ಗೋಗ್ಯಾಸ್‌ನಿಂದ ಅನ್ಯಾಯವಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕಚೇರಿ ಮುಂದೆ ಜಮಾಯಿಸಿ ಶಾಸಕರಲ್ಲಿ ಮನವಿ ಮಾಡಿ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದರು.


ಗ್ಯಾಸ್ ವಿತರಕರ ಸಭೆ:
ಬಳಿಕದ ಬೆಳವಣಿಗೆಯಲ್ಲಿ ಮಧ್ಯಾಹ್ನ ಸಹಾಯಕ ಕಮಿಷನರ್ ಕಚೇರಿಯಲ್ಲಿ ಎ.ಸಿ. ಸ್ಟೆಲ್ಲಾ ವರ್ಗೀಸ್ ನೇತೃತ್ವದಲ್ಲಿ ಗ್ಯಾಸ್ ವಿತರಕರ ಸಭೆ ನಡೆಸಿದ ಶಾಸಕರು, ಗ್ಯಾಸ್ ಕೊರತೆಯ ಕಾರಣ ಮುಂದಿಟ್ಟು ಆಟೋ ಗ್ಯಾಸ್ ದರ ಹೆಚ್ಚು ಮಾಡದಂತೆ ಸೂಚನೆ ನೀಡಿದರಲ್ಲದೆ,ನಿಯಮ ಮೀರಿ ದರ ಹೆಚ್ಚು ಮಾಡಿದಲ್ಲಿ ಪಂಪ್‌ಗೆ ಬೀಗ ಜಡಿದು ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು.ಇದೀಗ ಗೋಗ್ಯಾಸ್‌ನವರು ಆಟೋ ಗ್ಯಾಸ್ ದರವನ್ನು ಕಡಿಮೆ ಮಾಡಿದ್ದಾರೆ.

ಗೋಗ್ಯಾಸ್ ಮಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ನನ್ನ ಬಳಿ ಆಟೋ ಚಾಲಕರು ದೂರು ನೀಡಿದ್ದರು.ಈ ಬಗ್ಗೆ ಸೋಮವಾರ ಅಽಕಾರಿಗಳ ಸಭೆ ಕರೆದು ಗ್ಯಾಸ್ ವಿತರಕರಿಗೆ ಸೂಚನೆಯನ್ನು ನೀಡಿದ್ದೆ.ಇಂದು ಗೋಗ್ಯಾಸ್ ಮಾಲಕರು ಕರೆ ಮಾಡಿ ನಾಳೆಯಿಂದ ರೂ.100ಕ್ಕೆ ಆಟೋ ಚಾಲಕರಿಗೆ ಗ್ಯಾಸ್ ಪೂರೈಸುವುದಾಗಿ ತಿಳಿಸಿದ್ದಾರೆ
ಅಶೋಕ್ ಕುಮಾರ್ ರೈ, ಶಾಸಕರು

LEAVE A REPLY

Please enter your comment!
Please enter your name here