ಕೆಎಸ್‌ಆರ್‌ಟಿಸಿಯಿಂದ ಹನುಮಗಿರಿಗೆ ಹೆಚ್ಚುವರಿ ಬಸ್ ಸೌಲಭ್ಯ

0

ಪುತ್ತೂರು: ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಕ್ಷೇತ್ರಕ್ಕೆ ದರ್ಶನ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಿಂದ ಹೆಚ್ಚುವರಿ ಬಸ್ ಸೌಲಭ್ಯವನ್ನು ಒದಗಿಸಿಲಾಗಿದೆ.


ಸಾರಿಗೆ ನಿಗಮದಿಂದ ಪುತ್ತೂರು-ಈಶ್ವರಮಂಗಲ ರಸ್ತೆಯಲ್ಲಿ ಪ್ರತಿದಿನದ ರೂಟ್ ಬಸ್‌ಗಳ ಜೊತೆಗೆ ಪ್ರಯಾಣಿಕರ ಲಭ್ಯತೆಗೆ ಹೊಂದಿಕೊಂಡು ಹೆಚ್ಚುವರಿ ಬಸ್‌ಗಳನ್ನು ಒದಗಿಸಲಾಗುತ್ತಿದೆ. ಈ ಬಸ್‌ಗಳು ಪುತ್ತೂರು- ಈಶ್ವರಮಂಗಲ ಮಧ್ಯೆ ಸಂಚರಿಸಿ, ಪ್ರಯಾಣಿಕರ ಲಭ್ಯತೆ ಮೇರೆಗೆ ಕೊಟ್ಯಾಡಿ ತನಕ ಸಂಚರಿಸಲಿದೆ. ಎ.10ರಿಂದ ಹೆಚ್ಚುವರಿ ಬಸ್ ಸೌಲಭ್ಯವನ್ನು ಒದಗಿಸಲಾಗಿದ್ದು ಎ.12ರ ತನಕ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲಾಗಿದೆ. ಭಕ್ತಾದಿಗಳು ಈ ಸೌಲಭ್ಯವನ್ನು ಸದುಪಯೋಗಪಡೆದುಕೊಳ್ಳುವಂತೆ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here