ಬಲ್ನಾಡು ಉಳ್ಳಾಲ್ತಿ ದೈವಸ್ಥಾನಲ್ಲಿ ಕಿರುವಾಳು ಭಂಡಾರ, ನೇಮೋತ್ಸವದ ಪೂರ್ವಭಾವಿ ಸಭೆ – ಎ.16ರಂದು ಬೆಳಿಗ್ಗೆಯಿಂದಲೇ ಮಲ್ಲಿಗೆ ಸಮರ್ಪಣೆಗೆ ಅವಕಾಶ

0

ಪುತ್ತೂರು;ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಿರುವಾಳು ಭಂಡಾರ ಆಗಮನ ಹಾಗೂ ವರ್ಷಾವಧಿ ನೇಮೋತ್ಸವದ ಪೂರ್ವಭಾವಿ ಸಭೆಯು ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಪೂರ್ವ ಸಂಪ್ರದಾಯದಂತೆ ಏ.16ರಂದು ಕಿರುವಾಳು ಭಂಡಾರ ಆಗಮನದ ದಿನ ಬೆಳಗ್ಗೆ ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಬಳಿಕ ಸಂಜೆ 3:೦೦ರಿಂದ 5:೦೦ರವರೆಗೆ ಭಕ್ತಾದಿಗಳಿಗೆ ಮಲ್ಲಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಅದೇ ದಿನ ಸಂಜೆ 5:೦೦ ಗಂಟೆಗೆ ಕಿರುವಾಳು ಭಂಡಾರ ದೈವಸ್ಥಾನದಿಂದ ಹೊರಟು ದೇವಸ್ಥಾನಕ್ಕೆ ಆಗಮಿಸಲಿದೆ. ಬೈಪಾಸ್ ರಸ್ತೆಯಿಂದ ನಂತರ ಮಲ್ಲಿಗೆ ನೀಡುವ ಭಕ್ತಾದಿಗಳು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಂದು ಒಪ್ಪಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಎ.28ರಂದು ನಡೆಯಿಲಿರುವ ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವಾರ್ಷಿಕ ನೇಮ ನಡಾವಳಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಉತ್ಸವ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಪ್ರಧಾನ ಕಾರ್ಯದರ್ಶಿ ನವೀನ್ ಕರ್ಕೇರಾ ರಾಂಬೈಲು, ಸದಸ್ಯರಾದ ದೈವಸ್ಥಾನದ ಪ್ರಧಾನ ಅರ್ಚಕರಾದ ರವಿಚಂದ್ರ ನೆಲ್ಲಿತ್ತಾಯ, ಆನಂದ ಸುವರ್ಣ ಬಪ್ಪಳಿಗೆ, ಜಿನ್ನಪ್ಪ ಗೌಡ ಕಾಂತಿಲ, ಗಂಗಾಧರ ಗೌಡ ಓಟೆ, ವಿಶ್ವನಾಥ ಗೌಡ ಸೇನರಮೂಲೆ, ಸತೀಶ್ ನಾಯ್ಕ ಕಾನದಗುರಿ, ಕಿರಣ ಬಸಂತಕೋಡಿ, ಕರುಣಾಕರ ಕರ್ಕೆರ, ರುಕ್ಮಯ್ಯ ಕುಲಾಲ್ ಸುಂಕದಮೂಲೆ ಹಾಗೂ ಗಂಗಾಧರ ನಾಯ್ಕ ಕಬ್ಬಿನಹಿತ್ಲು, ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ರವಿಕೃಷ್ಣ ಭಟ್ ಕಲ್ಲಾಜೆ, ಕಚೇರಿ ವ್ಯವಸ್ತಾಪಕ ಚಂದ್ರಶೇಖರ ಭಟ್, ಆಡಳಿತಾಧಿಕಾರಿ, ಪಿ.ಡಿ.ಒ ದೇವಪ್ಪ ಪಿ.ಆರ್., ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಭೋಜರಾಜ್ ಗೌಡ, ದೈವದ ಚಾಕ್ರಿವರ್ಗದವರು ಸೇರಿದಂತೆ ಹಲವು ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here