






ಪುತ್ತೂರು: ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ಅಮ್ಮನವರ ಭಂಡಾರ ಬರುವಲ್ಲಿ ಕಟ್ಟಡದ ಕಿರಿದಾದ ಜಾಗವನ್ನು ಅಗಲೀಕರಣ ಮಾಡುವ ಸಂದರ್ಭ ಭಾಗಶಃ ಕಟ್ಟಡ ತೆರುವು ವಿಚಾರಕ್ಕೆ ಸಂಬಂಧಿಸಿ ಕಟ್ಟಡಕ್ಕೆ ಸಂಬಂಧಪಟ್ಟ ಕೋರ್ಟ್ ರಿಸಿವರ್ ಒಬ್ಬರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.


ಹಳೆಯ ಕಟ್ಟಡದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ದಾವೆ ಇದ್ದು ಬೆಳವಣಿಗೆಯಲ್ಲಿ ಅಂತಿಮ ತೀರ್ಪಿನಲ್ಲಿದೆ. ಈ ನಿಟ್ಟಿನಲ್ಲಿ ಕಟ್ಟಡದಲ್ಲಿರುವ ವ್ಯಾಪಾರ ಮಳಿಗೆಗಳ ಬಾಡಿಗೆಗಳನ್ನು ಸಂಗ್ರಹ ಮಾಡಿ ಕೋರ್ಟ್ ಪಾವತಿ ಮಾಡುವ ರಿಸಿವರ್ ಆಗಿ ಬಂಟ್ವಾಳದ ಕೇದಿಗೆ ಅರವಿಂದ ರಾವ್ ಆಗಿದ್ದರು. ಆದರೆ ಇದೀಗ ಭಾಗಶಃ ಕಟ್ಟಡ ತೆರವಾದ ಹಿನ್ನೆಲೆಯಲ್ಲಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.













