







ನೆಲ್ಯಾಡಿ: ರೆಖ್ಯ ಗ್ರಾಮದ ಮಲ್ನಾಡ್ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಹೋಟೆಲ್‌ನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ಘಟನೆ ಏ.18ರಂದು ಸಂಜೆ ನಡೆದಿದೆ.


ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೆಖ್ಯ ಗ್ರಾಮದ ಎಂಜಿರ ಸಮೀಪದಲ್ಲಿರುವ ಮಲ್ನಾಡ್ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಹರಿಶಂಕರ್(52ವ.) ಮೃತಪಟ್ಟವರಾಗಿದ್ದಾರೆ.



ಶೌಚಾಲಯಕ್ಕೆ ಹೋಗಿದ್ದ ಈಗ ಎಷ್ಟೇ ಸಮಯವಾದರೂ ವಾಪಸ್ ಬಾರದೆ ಇದ್ದಾಗ ಕೆಲಸಗಾರರು ಕಿಟಕಿಯಿಂದ ಇಣುಕಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಹೊಟೇಲ್ ಮಾಲೀಕರು ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟ ಕೆಲಸಗಾರನ ಹೆಸರು ಮತ್ತು ರಾಜ್ಯ ಮಾತ್ರ ತಿಳಿದಿದ್ದು ಆತನ ಸರಿಯಾದ ವಿಳಾಸ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಆತನ ಮನೆಮಂದಿಯ ಪತ್ತೆಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.










