ಭಕ್ತರಿಗೆ, ಮಹಾಲಿಂಗೇಶ್ವರ ಕ್ಷೇತ್ರಕ್ಕಾಗಿ ಸಾವಿರ ಕೇಸ್ ಬಿದ್ರು ನಾವು ದೇವರಿಗೆ, ಜನರಿಗಾಗಿ ಮಾಡುವ ಕೆಲಸದಲ್ಲಿ ಹಿಂಜರಿಯುವುದಿಲ್ಲ – ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಭಕ್ತರಿಗಾಗಿ ಮತ್ತು ಮಹಾಲಿಂಗೇಶ್ವರ ಕ್ಷೇತ್ರಕ್ಕಾಗಿ ಸಾವಿರ ಕೇಸ್ ಬಿದ್ದರೂ ನಾವು ದೇವರಿಗೆ ಮತ್ತು ಜನರಿಗಾಗಿ ಮಾಡುವ ಕೆಲಸದಲ್ಲಿ ಹಿಂಜರಿಯುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಎ.19ರಂಂದು ಅವರು ಪುತ್ತೂರು ಜಾತ್ರೆಯ ಧ್ವಜಾರೋಹಣದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಪ್ರತಿ ವರ್ಷ ಉಳ್ಳಾಲ್ತಿ ಅಮ್ಮನವರ ಮತ್ತು ಮಹಾಲಿಂಗೇಶ್ವರ ದೇವರ ಭೇಟಿ ನಡೆಯುತ್ತದೆ. ಆ ಭೇಟಿ ನಡೆಯುವ ಸಮಯ ಅಲ್ಲಿ ಬರುವ ದಾರಿ ಭಾರಿ ಕಿರಿದಾಗಿದ್ದು, ಈ ಕುರಿತು ಭಕ್ತರು ಅನೇಕ ಬಾರಿ ತಿಳಿಸಿದ್ದಾರೆ. ಆ ಹಳೆಯ ಕಟ್ಟಡದಿಂದ ಭಕ್ತರಿಗೆ ತೊಂದರೆ ಆಗುತ್ತಿತ್ತು. ಈಗಾಗಲೇ ಕಟ್ಟಡವನ್ನು ಕೋರ್ಟ್‌ ತೆರವು ಮಾಡಲು ಆದೇಶ ನೀಡಿದೆ. ಆದರೆ ನಗರಸಭೆ ಬೇಕಾ ಬೇಡವ ಎಂದಿದೆ. ಒಂದು ವರ್ಷದ ಹಿಂದೆ ನಿರಾಳ ಹೊಟೇಲ್ ಅನ್ನು ನಗರಸಭೆ ಕೋರ್ಟ್ ಆದೇಶದಂತೆ ಸೀಸ್ ಮಾಡಿ ಅವರಲ್ಲಿದ್ದ ಸಾಮಾಗ್ರಿಗಳನ್ನು ಕೂಡಾ ಒಳಗಡೆ ಇರಿಸಲಾಗಿತ್ತು. ಹಳೆಯ ಕಟ್ಟಡದ ಕುರಿತು ಜಾಗಕ್ಕೆ ಸಂಬಂಧಿಸಿದವರಲ್ಲಿ ಹಲವು ಬಾರಿ ವಿನಂತಿ ಮಾಡಿದ್ದೇವೆ. ನಮಗೆ ಭಕ್ತರ ಬೇಡಿಕೆಯಂತೆ ಕಟ್ಟಡ ತೆರವು ಮಾಡಬೇಕಾಗಿತ್ತು. ಹೊರತು ಜಾಗದ ಬಗ್ಗೆ ಕಾಳಜಿಯಲ್ಲ. ಕಿರಿದಾದ ಜಾಗದಲ್ಲಿ ಉಳ್ಳಾಲ್ತಿ ಅಮ್ಮ ಬರುವ ಸಂದರ್ಭ ಸುಮಾರು 30 ರಿಂದ 40ಸಾವಿರ ಜನರು ಬರುತ್ತಾರೆ. ಇದೇ ರೀತಿ ರಾಜ್ಯದಲ್ಲಿ ಈ ಹಿಂದೆ ಕ್ರಿಕೆಟ್ ಮೈದಾನದಲ್ಲಿ ಜನಸಂಧಣಿ ಸೇರಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಭಕ್ತಾದಿಗಳಿಗೆ ಬೇಕಾದ ವ್ಯವಸ್ಥೆ ಮಾಡುವುದು ನಮ್ಮ ಜವಾಬ್ದಾರಿ. ನಮಗೆ ಗೊತ್ತಿದ್ದವರ ಮೂಲಕ ಕಟ್ಟಡಕ್ಕೆ ಸಂಬಂಧಿಸಿದವರಲ್ಲಿ ಹೇಳಿದ್ದೇವೆ. ಜೊತೆಗೆ ಕೋರ್ಟ್‌ನಿಂದಲೂ ಆದೇಶವಿದೆ. ಹಾಗಾಗಿ ಹಳೆಯ ಕಟ್ಟಡ ತೆರವು ಮಾಡಿದ್ದೇವೆ. ಈ ಕುರಿತು ವಕೀಲರಿಗೂ ತಿಳಿಸುವ ಕೆಲಸ ಮಾಡಿದ್ದೇವೆ. ಜಾಗದ ಮಾಲಕರೂ ಕೂಡಾ ಕಟ್ಟಡ ತೆರವಿಗೆ ಕೋರ್ಟ್ ಮೂಲಕ ಆದೇಶ ತಂದಿದ್ದಾರೆ. ಆದರೆ ಈಗ ಅವರು ನನ್ನ ಮತ್ತು ಈಶ್ವರ ಭಟ್ ಅವರ ಮೇಲೆ ದೂರು ನೀಡಿರುವ ಕುರಿತು ಮಾಧ್ಯಮದ ಮೂಲಕ ತಿಳಿದು ಬಂದಿದೆ. ಆದರೆ ಮಹಾಲಿಂಗೇಶ್ವರನಿಗಾಗಿ ಒಂದಲ್ಲ ಸಾವಿರ ಕೇಸು ನಮ್ಮ ಮೇಲೆ ಬೀಳಲಿ ಭಕ್ತರಿಗೆ ಮತ್ತು ಮಹಾಲಿಂಗೇಶ್ವರ ಕ್ಷೇತ್ರಕ್ಕಾಗಿ ಸಾವಿರ ಕೇಸ್ ಬಿದ್ರು ನಾವು ದೇವರಿಗೆ ಮತ್ತು ಜನರಿಗಾಗಿ ಮಾಡುವ ಕೆಲಸಕ್ಕೆ ಹಿಂಜರಿಯುವುದಿಲ್ಲ. ಕಾನೂನಿನ ವಿರೋಧ ಹೋಗುವುದಿಲ್ಲ. ದೇವರಿಗೆ ಸಂಬಂಧಿಸಿದ ಜಾಗವನ್ನು ಅಗಲೀಕರಣ ಮಾಡಿದ್ದೇವೆ ಹೊರತು ಅವರ ಜಾಗದಲ್ಲಿ ಮಹಾಲಿಂಗೇಶ್ವರನಿಗಾಗಲಿ, ನಮಗಾಗಲಿ ಯಾವುದೇ ಆಸಕ್ತಿ ಇಲ್ಲ. ನಾಳೆ ಕಟ್ಟಡದ ಬಿದ್ದು ಯಾರಾದರೂ ಸತ್ರೆ ಕೇಳುವುದು ಎಂ.ಎಲ್.ಎಯಲ್ಲಿ. ಹಾಗಾಗಿ ಏನೆ ಸಮಸ್ಯೆ ಬಂದರೂ ಎದುರಿಸಲು ಮಹಾಲಿಂಗೇಶ್ವರ ಶಕ್ತಿ ಕೊಡುತ್ತಾನೆ. ನಾವು ಯಾರಿಗೂ ಅನ್ಯಾಯ ಮಾಡಲು ಹೋಗಿಲ್ಲ. ನಮ್ಮ ಮೇಲೆ ಕೇಸು ನೀಡಿದವರ ಮೇಲೂ ದೇವಸ್ಥಾನದ ಭಕ್ತಾದಿಗಳು ಸಾರ್ವಜನಿಕ ಕೇಸು ನೀಡುತ್ತಾರೆ. ನಮ್ಮ ಚಿಂತನೆಯಂತೆ ಉಳ್ಳಾಲ್ತಿ ಅಮ್ಮನವರ ಭೇಟಿ ಸ್ಥಳವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕು. ಒಟ್ಟಿನಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಯಾಗಬೇಕು ಎಂದರು.

ಶಾಸಕರು ಹೇಳಿದ್ದು….
*ದೇವರಿಗಾಗಿ ಜಾಗವನ್ನು ಅಗಲೀಕರಣ ಮಾಡಿದ್ದೇವೆ
*ಕಾನೂನಿನ ವಿರೋಧ ಹೋಗುವುದಿಲ್ಲ
*ಅವರ ಜಾಗದಲ್ಲಿ ಮಹಾಲಿಂಗೇಶ್ವರನಿಗಾಗಲಿ, ನಮಗಾಗಲಿ ಯಾವುದೇ ಆಸಕ್ತಿ ಇಲ್ಲ
*ನಾಳೆ ಕಟ್ಟಡದ ಬಿದ್ದು ಯಾರಾದರೂ ಸತ್ರೆ ಕೇಳುವುದು ಎಂ.ಎಲ್.ಎಯಲ್ಲಿ
*ಏನೆ ಸಮಸ್ಯೆ ಬಂದರೂ ಎದುರಿಸಲು ಮಹಾಲಿಂಗೇಶ್ವರ ಶಕ್ತಿ ಕೊಡುತ್ತಾನೆ.
*ನಾವು ಯಾರಿಗೂ ಅನ್ಯಾಯ ಮಾಡಲು ಹೋಗಿಲ್ಲ.
*ಕೇಸು ನೀಡಿದವರ ಮೇಲೂ ಭಕ್ತಾದಿಗಳು ಸಾರ್ವಜನಿಕ ಕೇಸು
*ಉಳ್ಳಾಲ್ತಿ ಅಮ್ಮನವರ ಭೇಟಿ ಸ್ಥಳವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕು

LEAVE A REPLY

Please enter your comment!
Please enter your name here