ಪುತ್ತೂರು ನ್ಯಾಯಾಲಯದ ಮೂವರು ನ್ಯಾಯಾಧೀಶರಿಗೆ ವರ್ಗಾವಣೆ : ಪುತ್ತೂರಿಗೆ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು- ನೂತನ ನ್ಯಾಯಾಧೀಶರಾಗಿ ಸುಮಂಗಲಾ ನೇಮಕ

0

ಪುತ್ತೂರು: ಬನ್ನೂರಿನ ಆನೆಮಜಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ನ್ಯಾಯಾಲಯದ ಮೂವರು ನ್ಯಾಯಾಧೀಶರು ವರ್ಗಾವಣೆಗೊಂಡಿದ್ದಾರೆ.


5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಶಿವಣ್ಣ ಎಚ್.ಆರ್. ಮತ್ತು 2ನೇ ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಅವರಿಗೆ ವರ್ಗಾವಣೆ ಆದೇಶವಾಗಿದೆ. ಸರಿತಾ ಡಿ. ಅವರನ್ನು ಕಲ್ಬುರ್ಗಿ ನ್ಯಾಯಾಲಯಕ್ಕೆ, ಶಿವಣ್ಣ ಹೆಚ್.ಆರ್. ಅವರನ್ನು ಮೈಸೂರು ನ್ಯಾಯಾಲಯಕ್ಕೆ ಮತ್ತು ಯೋಗೇಂದ್ರ ಶೆಟ್ಟಿಯವರನ್ನು ಹೊಳೆನರಸೀಪುರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಸದಾನಂದ ನಾಗಪ್ಪ ನಾಯ್ಕ್ ಎಂಬವರನ್ನು ಕೊಪ್ಪಳದಿಂದ ಪುತ್ತೂರಿಗೆ ವರ್ಗಾವಣೆ ಮಾಡಲಾಗಿದೆ.


ನೂತನ ನ್ಯಾಯಾಲಯ ಮಂಜೂರು:
ಪುತ್ತೂರಿಗೆ ಹೆಚ್ಚುವರಿಯಾಗಿ 7ನೇ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದು ಈ ನ್ಯಾಯಾಲಯಕ್ಕೆ ಪ್ರಥಮ ನ್ಯಾಯಾಧೀಶರಾಗಿ ಬೆಂಗಳೂರಿನಿಂದ ಸುಮಂಗಲ ಚಾಕಲಬ್ಬಿ ಅವರನ್ನು ವರ್ಗಾವಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here