ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ, ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ

0

ಪಟ್ಟೆ ಬಡಗನ್ನೂರು: 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ.. ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶಾಲೆಗೆ 100 ಶೇಕಡಾ ಫಲಿತಾಂಶ ಲಭಿಸಿರುತ್ತದೆ.

 ವಿಶಿಷ್ಟ ಶ್ರೇಣಿಯಲ್ಲಿ ದನ್ವಿತ್ ಗೌಡ ಕೆ ಪಿ 566(90.56%), ತೃತಿಕ್ 561(89.76%), ಸಿಂಚನ 543 (86.88%) ಅಂಕಗಳನ್ನು ಪಡೆದು ದನ್ವಿತ್ ಗೌಡ ಕೆ ಪಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು, ಶಾಲಾ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ. ಸಂಸ್ಥೆಯು ನಿರಂತರ ವರ್ಷಗಳಲ್ಲಿ ಶೇಕಡಾ 100 ಫಲಿತಾಂಶ ಪಡೆಯುತ್ತಿದ್ದು, ಇದು ಶಾಲೆಯ ಶೈಕ್ಷಣಿಕ ಗುಣಮಟ್ಟದ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಮುಖ್ಯ ಗುರು ಸುಮನಾ ಬಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here