






ಉಪ್ಪಿನಂಗಡಿ: 2025-26ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಳಂತಿಲದ ಜ್ಞಾನ ಭಾರತಿ ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಾದ ರೇಹಾನ್ ಯು.ಟಿ. ( 592), ಸುಮಯ್ಯ ಸಲ್ವಾ (585) , ನಿಹಮ ಫಾತಿಮಾ (583), ಶೆಹರಿಶ್ ಶರಾವತ್ (582), ಫಾತಿಮತುಲ್ ಹರ್ಷಿದ (572), ಐಶಾತುಲ್ ಫಾತಿಮಾ (543), ಅಫೀನ (532), ಫಾತೀಮಾ ನಿಹಮ (532) ಅಂಕ ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.












