ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ನೇಮ ನಡಾವಳಿಗೆ ಚಾಲನೆ

0

ವಾಲಸರಿ ಗದ್ದೆಗೆಯಲ್ಲಿ ಮುಂಡ್ಯ ಹಾಕಿ, ಗದ್ದೆಗೆ ಚೆಂಡು ಉರುಳಿಸುವ ಕಾರ್ಯಕ್ರಮ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಏ.28ರಂದು ನಡೆಯಲಿರುವ ವರ್ಷಾವಧಿ ನೇಮ ನಡಾವಳಿಯ ಅಂಗವಾಗಿ ಏ.25ರಂದು ಮುಂಡ್ಯ ಹಾಕುವ ಕಾರ್ಯಕ್ರಮವು ಪೂರ್ವ ಸಂಪ್ರದಾಯದಂತೆ ನೆರವೇರಿತು.


ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನೇಮ ನಡಾವಳಿಗೆ ಗೊನೆ ಮುಹೂರ್ತ ನಡೆದು 4 ದಿನಗಳ ಬಳಿಕ ವಾಲಸರಿ ಗದ್ದೆಯಲ್ಲಿ ಮುಂಡ್ಯ ಹಾಕುವ ಮತ್ತು ಚೆಂಡು ಉರುಳಿಸುವ ಕಾರ್ಯಕ್ರಮದ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಗುತ್ತದೆ. ದೈವಸ್ಥಾನದ ಮೂಲ ಸ್ಥಾನದಲ್ಲಿ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯರವರು ಪ್ರಾರ್ಥಿಸಿದ ಬಳಿಕ ಮಲರಾಯ ದೈವದ ದರ್ಶನ ಪಾತ್ರಿಯೊಂದಿಗೆ ಆಡಳಿತ ಮಂಡಳಿ ಹಾಗೂ ಊರ ಭಕ್ತಾದಿಗಳು ಸೇರಿಕೊಂಡು ವಾಲಸರಿ ಗದ್ದೆಗೆ ಹೋಗಿ ಅಲ್ಲಿ ಮುಂಡ್ಯ ಹಾಕಿ ಬಳಿಕ ಗದ್ದೆಗೆ ಚೆಂಡು ಉರುಳಿಸುವ ಕಾರ್ಯಕ್ರಮ ನಡೆಯಿತು.

ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಅವರು ಗದ್ದೆಗೆ ಚೆಂಡನ್ನು ಉರುಳಿಸಿದರು. ಸಂಪ್ರದಾಯದಂತೆ, ರವಿ ಬಲ್ನಾಡು ಅವರು ಗದ್ದೆಯುದ್ದಕ್ಕೂ ಚೆಂಡನ್ನು ಉರುಳಿಸಿಕೊಂಡು ಮೂರು ಸುತ್ತು ಬರುವ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಯಿತು.


ದೈವಸ್ಥಾನದ ಆಡಳಿತಾಧಿಕಾರಿ ದೇವಪ್ಪ ಪಿ.ಆರ್, ಉತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಪ್ರಧಾನ ಕಾರ್ಯದರ್ಶಿ ನವೀನ್ ಕರ್ಕೇರಾ ರಾಂಬೈಲು, ಸದಸ್ಯರಾದ ದೈವಸ್ಥಾನದ ಆನಂದ ಸುವರ್ಣ ಬಪ್ಪಳಿಗೆ, ಜಿನ್ನಪ್ಪ ಗೌಡ ಕಾಂತಿಲ, ಗಂಗಾಧರ ಗೌಡ ಓಟೆ, ವಿಶ್ವನಾಥ ಗೌಡ ಸೇನರಮೂಲೆ, ಸತೀಶ್ ನಾಯ್ಕ ಕಾನದಗುರಿ, ಕಿರಣ ಬಸಂತಕೋಡಿ, ಕರುಣಾಕರ ಕರ್ಕೆರ, ರುಕ್ಮಯ್ಯ ಕುಲಾಲ್ ಸುಂಕದಮೂಲೆ, ಗಂಗಾಧರ ನಾಯ್ಕ ಕಬ್ಬಿನಹಿತ್ಲು, ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ರವಿಕೃಷ್ಣ ಭಟ್ ಕಲ್ಲಾಜೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಾಧವ ಗೌಡ ಕಾಂತಿಲ, ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಕಿರಣ್ ಕುಮಾರ್ ರೈ ಕಬ್ಬನಹಿತ್ತಿಲು, ನಾರಾಯಣ ಪೂಜಾರಿ ನೆಕ್ಕರೆ, ಅಶೋಕ್ ಕುಮಾರ್ ಪದವು, ಕಚೇರಿ ವ್ಯವಸ್ಥಾಪಕ ಚಂದ್ರಶೇಖರ ಭಟ್ ಸಹಿತ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here