







ಪುತ್ತೂರು: ಬಿಸಿಲಿನ ತಾಪಮಾನ ದಿನೇದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಜನಗಣತಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ತಂಡದ ಆರೋಗ್ಯದ ದೃಷ್ಟಿಯಿಂದ, ರೋಟರಿ ಕ್ಲಬ್ ಪುತ್ತೂರು ಸಿಟಿಯಿಂದ 600 ಪ್ಯಾಕ್ ORS ಪೌಡರ್ಗಳನ್ನು ವಿತರಿಸಲಾಯಿತು.



ನಗರಸಭೆ ಪೌರಾಯುಕ್ತರ ಮೂಲಕ ಈ ORS ಪೌಡರ್ಗಳನ್ನು ಹಸ್ತಾಂತರಿಸಲಾಯಿತು. ಪ್ರಸ್ತುತ ತೀವ್ರ ಬಿಸಿಲಿನ ನಡುವೆ ಜನಗಣತಿ ಕಾರ್ಯ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದ್ದು, ಇಂತಹ ಸಂದರ್ಭಗಳಲ್ಲಿ ಸಂಘ-ಸಂಸ್ಥೆಗಳ ಸಹಕಾರ ಶ್ಲಾಘನೀಯವೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ರೊ. ಉಲ್ಲಾಸ ಪೈ ಹಾಗೂ ರೊ. ಜಾನ್ ಕುತ್ತಿನ ಉಪಸ್ಥಿತರಿದ್ದರು












