







ಕೇಂದ್ರೀಯ (ಸಿಬಿಎಸ್ಇ) ಪಠ್ಯಕ್ರಮ ಯಾಕೆ?



- ಕೌಶಲ್ಯಾಧಾರಿತ & ಕೈಗಾರಿಕಾ ಹೊಂದಾಣಿಕೆಯ ಶಿಕ್ಷಣ (Industry aligned)
- ನೀಟ್, ಜೆಇಇ (JEE/NEET Exams) ಗೆ ದೃಢವಾದ ಅಡಿಪಾಯ.
- ನವೀಕರಿತ & ಪ್ರಸ್ತುತ ಪಠ್ಯಕ್ರಮ
• ಅನುಭವಾಧಾರಿತ ಕಲಿಕೆ - 21ನೇ ಶತಮಾನದ ಕೌಶಲ್ಯಗಳ ಬೆಳವಣಿಗೆ
ರಾಜ್ಯ ಪಠ್ಯಕ್ರಮದಿಂದ ಸಿಬಿಎಸ್ಇ ಗೆ ಸುಗಮವಾಗಿ ಬದಲಾಯಿಸಬಹುದು



- ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮದಿಂದ ಸಿಬಿಎಸ್ಇ ಗೆ ಬದಲಾಯಿಸಬಹುದು.
- ಸಿಬಿಎಸ್ಇ ಪಠ್ಯಕ್ರಮವು ಅರ್ಥ ಮಾಡಿಕೊಳ್ಳುವಿಕೆ ಹಾಗೂ ಅನ್ವಯಕ್ಕೆ ಒತ್ತು ನೀಡುತ್ತದೆ (ಅನುಭವಾಧಾರಿತ ಕಲಿಕೆ ಮೂಲಕ)
- ಪೋಷಕರ ಬೆಂಬಲ ಹಾಗೂ ಶಿಕ್ಷಕರ ನೆರವಿನೊಂದಿಗೆ ಬದಲಾದ ಪಠ್ಯಕ್ರಮಕ್ಕೆ ಹೊಂದಿಕೊಳ್ಳುವುದರ ಜೊತೆಗೆ ಉತ್ತಮ ಪ್ರಗತಿಯೂ ಸುಲಭಸಾಧ್ಯ.
- ಪ್ರಾಥಮಿಕ (1-5 ತರಗತಿ), 6ನೇ ತರಗತಿ ಹಾಗೂ 8ನೇ ತರಗತಿಗಳು ಸುಗಮವಾಗಿ ಬದಲಾಗಲು ಸೂಕ್ತ ವಾದ ಹಂತಗಳು.
- ಪುತ್ತೂರು: ಶ್ರೇಷ್ಠ ,ಆದರ್ಶ ಉದ್ದೇಶಗಳನ್ನಿಟ್ಟುಕೊಂಡು, ಕೇಂದ್ರೀಯ ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ, ತನ್ನ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವಂತಹ ಸಂಸ್ಥೆ ವಿವೇಕಾನಂದ ಸೆಂಟ್ರಲ್ ಸ್ಕೂಲ್. ಶಾಲಾ ಶಿಕ್ಷಣದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಗುರುಕುಲ ಆಧಾರಿತ ಪಂಚಮುಖಿ ಶಿಕ್ಷಣ ಯೋಜನೆಯ ಅಡಿಯಲ್ಲಿ ಮಕ್ಕಳ ಬೌದ್ಧಿಕ, ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಸಮಗ್ರ ಶಿಕ್ಷಣದ ಜೊತೆಗೆ ರಾಷ್ಟ್ರ ಚಿಂತನೆ, ದೇಶಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧನೆಯ ಮುಖ್ಯ ಅಂಶವನ್ನಾಗಿ ಮಾಡಿಕೊಂಡಿದೆ.
“ ಜ್ಞಾನ ಮತ್ತು ಕೌಶಲ್ಯದ ಸಮನ್ವಯ ಹಾಗೂ ಮೌಲ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ”
ಪಂಚಮುಖಿ ಶಿಕ್ಷಣ
ಸಂಪೂರ್ಣ ವ್ಯಕ್ತಿತ್ವದ ಬೆಳವಣಿಗೆಗೆ ನಮ್ಮ ಬದ್ಧತೆ
ಬೌದ್ಧಿಕ:
ಪ್ರಾಯೋಗಿಕ ಶಿಕ್ಷಣ, ಕ್ಷೇತ್ರ ಭೇಟಿ, ತಜ್ಞರ ಉಪನ್ಯಾಸಗಳು
ಭಾವನಾತ್ಮಕ:
ಭಾರತ ಮಾತಾ ಪೂಜನ, ಮಾತೃಭೋಜನ, ಪಾದಪೂಜನ ಕಾರ್ಯಕ್ರಮಗಳು.
ಆಧ್ಯಾತ್ಮಿಕ:
ಧಾರ್ಮಿಕ ಶಿಕ್ಷಣ, ಭಜನ್ ಸಂಧ್ಯಾ, ಗೀತಾಮೃತಂ
ಶಾರೀರಿಕ :
ಕ್ರೀಡೆಗಳು , ಯೋಗ, ಸ್ಕೌಟ್ಸ್ ಮತ್ತು ಗೈಡ್ಸ್ , ಎಜುಸ್ಪೋರ್ಟ್ಸ್
ಮಾನಸಿಕ:
ಕಲೆಗಳು , ಸಂಗೀತ, ಪ್ರಾಣಾಯಾಮ, ಧ್ಯಾನ

ಆಧುನಿಕ ಶಿಕ್ಷಣ 5.0
● ಸ್ಮಾರ್ಟ್ ಪ್ಯಾನೆಲ್ಗಳು – ಡಿಜಿಟಲ್ ತರಗತಿಗಳು
● ಅನುಭವ ಆಧಾರಿತ ಕಲಿಕೆ – ಚಟುವಟಿಕೆಗಳ ಮೂಲಕ ಕಲಿಕೆ
● ಮಾನವ ಕೇಂದ್ರಿತ ಕಲಿಕೆ – ಭಾವನಾತ್ಮಕ ಬುದ್ಧಿಮತ್ತೆ, ಸೃಜನಶೀಲತೆ, ನೈತಿಕತೆ
● ಸಿಬಿಎಸ್ಇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುವಿಕೆ
● 100% NEP ಶಾಲೆ
- ಹೋಲಿಸ್ಟಿಕ್ ಪ್ರಗತಿ ಕಾರ್ಡ್:
ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಯನ್ನು ಅರಿವಿನ, ಭಾವನಾತ್ಮಕ, ಸಾಮಾಜಿಕ-ಭಾವನಾತ್ಮಕ ಮತ್ತು ಮನೋಚಾಲನಾ ಕ್ಷೇತ್ರಗಳಲ್ಲಿ ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ 360-ಡಿಗ್ರಿ, ಬಹು ಆಯಾಮದ ಮೌಲ್ಯಮಾಪನ ಸಾಧನ.
• ಭಾವನಾತ್ಮಕ ಬುದ್ಧಿಮತ್ತೆ ಮತ್ತು ನೈತಿಕತೆ - ಕೌಶಲ್ಯ ಆಧಾರಿತ ಮಾದರಿಗಳ ಸಮಗ್ರತೆ
– ಬೇಕಿಂಗ್
– ಮುಖವಾಡ ತಯಾರಿಕೆ
– ಗಿಡಮೂಲಿಕೆ ಪರಂಪರೆ (Herbal Heritage)
– ಕೃತಕ ಬುದ್ಧಿಮತ್ತೆ (AI)
– ಆರ್ಥಿಕ ಸಾಕ್ಷರತೆ ಸೌಲಭ್ಯಗಳು
● 3D ವಿಜ್ಞಾನ ಪಾರ್ಕ್
●ವಿಜ್ಞಾನ ಮತ್ತು ಜಿಯೋಗ್ರಾಫಿ ಪ್ರಯೋಗಾಲಯ
●ಗಣಿತ ಮತ್ತು ಭಾಷಾ ಪ್ರಯೋಗಾಲಯ
●ಕಂಪ್ಯೂಟರ್ ಪ್ರಯೋಗಾಲಯ
●ಗ್ರಂಥಾಲಯ
●ಅಮ್ಫಿಥಿಯೇಟರ್ (Amphitheater)
ಸಾಧನೆಗಳು
- ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ (10 ನೇ ತರಗತಿ – 2024–25 ಹಾಗೂ 2025-26)
- 100% ಫಲಿತಾಂಶ – (ಎಲ್ಲಾ ಶೈಕ್ಷಣಿಕ ವರ್ಷಗಳಲ್ಲಿ ) 60.5 ಶೇಕಡಾ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.
30.5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ. ವಿದ್ಯಾರ್ಥಿಗಳು Unspoken Truths ಎಂಬ ಮೊಬೈಲ್ ಅಪ್ಲಿಕೇಶನ್ ನ್ನು ಪ್ರಸ್ತುತ ಪಡಿಸಿದ್ದು ರಾಷ್ಟ್ರ ಮಟ್ಟದಲ್ಲಿ Coolest Projects of India ವಿಜ್ಞಾನ ಸಮಾವೇಶದಲ್ಲಿ ಬೆಸ್ಟ್ ಫೇವರೇಟ್ ಅವಾರ್ಡ್ ಗಳಿಕೆ. ಅಲ್ಲದೆ ಈ ವಿದ್ಯಾರ್ಧಿಗಳು ಟೀಮ್ ಇಂಡಿಯಾ ಫಾರ್ FGC-2026 “ನ 22 ತಂಡಗಳಲ್ಲಿ ಸ್ಥಾನ ಪಡೆದು ಮೂರನೇ ಹಂತದ ಸ್ಪರ್ಧೆಗೆ ಆಯ್ಕೆ.
- 100% ಫಲಿತಾಂಶ – (ಎಲ್ಲಾ ಶೈಕ್ಷಣಿಕ ವರ್ಷಗಳಲ್ಲಿ ) 60.5 ಶೇಕಡಾ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.
- ಹುಡುಗಿಯರಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿಸಲು ಟೆಕ್ನೋವೇಷನ್ ಯೋಜನೆ ಜಾರಿ.
- Technovation Girls ಸ್ಪರ್ಧೆಯಲ್ಲಿ ಮೊಬೈಲ್ ಅಪ್ಲಿಕೇಶನ್ ಗಳ ಪ್ರಸ್ತುತಿ.
- ವಿಜ್ಞಾನ ಒಲಂಪಿಯಾಡ್ Foundation ಆಯೋಜಿಸಿದ್ದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಹಲವು ಚಿನ್ನದ ಹಾಗೂ ಬೆಳ್ಳಿಯ ಪದಕ ಗಳಿಕೆ.
- ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಭಾರತೀಯ ಜ್ಞಾನಪರಂಪರೆಯ ಅರಿವಿಗಾಗಿ ನಡೆಸುವ ಸಂಸ್ಕೃತ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಕೆ.

- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರಾಜ್ಯ ಪುರಸ್ಕಾರ್ ಅವಾರ್ಡ್ ಗಳಿಕೆ.
- ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ.
- ರಾಜ್ಯ ಮಟ್ಟದ ಕರಾಟೆಯಲ್ಲಿ ಬೆಳ್ಳಿ ಪದಕ.
- ರಾಷ್ಟ್ರಮಟ್ಟದ ಚೆಸ್ ಪಂದ್ಯಾಟದಲ್ಲಿ ಬೆಳ್ಳಿ ಪದಕ.
- ಟ್ಯುನೇಷಿಯದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಗ್ರಾಂಡ್ಅ ವಾರ್ಡ್ ಗಳಿಕೆ.
- ಕೆಳದಿ ಚೆನ್ನಮ್ಮ ಪ್ರಶಸ್ತಿ ಗಳಿಕೆ
ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿಶೇಷತೆಗಳು
- ಸಂಸ್ಕಾರಯುತ ಭಾರತೀಯ ಶಿಕ್ಷಣ.
- ಭಗವದ್ಗೀತಾ ತರಗತಿ – ‘ಗೀತಾಮೃತಂ’.
- ಹಿಂದಿ ಪ್ರಚಾರ ಸಮಿತಿ, ಚಿತ್ರಕಲಾ ಪರೀಕ್ಷೆ
- KSET, CTET ಮತ್ತು KARTET ಮುಂತಾದ ಪರೀಕ್ಷೆಗಳಲ್ಲಿ ಅರ್ಹತೆಗೊಂಡ ಶಿಕ್ಷಕರ ಬೋಧನೆ .
- ಘೋಷ್, ಭರತನಾಟ್ಯ, ಕ್ರೀಡೆ, ಕಲೆ, ಸಂಗೀತ ಮುಂತಾದ ತರಗತಿಗಳು.
- ಕಲಿಕೆಯಲ್ಲಿ ಹಿಂದುಳಿದವರಿಗಾಗಿ ವಿಶೇಷ ತರಗತಿಗಳು
- ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ಗ್ರಂಥಾಲಯ.
- ಹತ್ತು ಹಲವು ಪಠ್ಯೇತರ ಚಟುವಟಿಕೆಗಳು.
- ಸಾರಿಗೆ ಸೌಲಭ್ಯ.
- ಪ್ರಾಜೆಕ್ಟ್ ಆಧಾರಿತ ಕಲಿಕೆ.
- ಮಕ್ಕಳ ಸುರಕ್ಷತೆಗಾಗಿ ಸಿಸಿ ಟಿವಿ.
- 6ನೇ ತರಗತಿಯಿಂದ ಐಚ್ಛಿಕ ಭಾಷೆಯಾಗಿ ಸಂಸ್ಕೃತ ಮತ್ತು ಹಿಂದಿ.
- ರಾಮಾಯಣ, ಮಹಾಭಾರತ ಮುಂತಾದ ಪರೀಕ್ಷೆ .
- ‘ಚೇತನಾ ‘ ಕಾರ್ಯಕ್ರಮ – ತಜ್ಞರ ಜೊತೆ ಸಂವಾದ.
- ಆಪ್ತ ಸಮಾಲೋಚನಾ ಕಾರ್ಯಕ್ರಮ.
- 15 ಪುಸ್ತಕಗಳ ಸವಾಲು.
- ಲೆಕ್ಕದ ಕಟ್ಟೆ – ಗಣಿತ ಸ್ಪರ್ಧೆ
ಒಳಗಿರುವ ಪ್ರತಿಭೆಯನ್ನು ಗುರುತಿಸಿ ಪುಟಕ್ಕಿಟ್ಟ ಚಿನ್ನದಂತೆ ಮಕ್ಕಳನ್ನು ಪ್ರತಿಭಾಶಾಲಿಗಳನ್ನಾಗಿ ಮಾಡುವುದರ ಜೊತೆಗೆ ಸನಾತನ ಸಂಸ್ಕೃತಿಯ ಸಂಸ್ಕಾರಗಳನ್ನು ಅಂತರ್ಗತ ಮಾಡಿಕೊಂಡು, ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಧೈರ್ಯ,ಸಾಹಸ ಆತ್ಮವಿಶ್ವಾಸಗಳೊಂದಿಗೆ ತಮ್ಮ ಪ್ರತಿಭೆಯ ಮೂಲಕ ಧನಾತ್ಮಕ ಪರಿಣಾಮ ಬೀರುವಂತಹ ವ್ಯಕ್ತಿತ್ವ ನಿರ್ಮಾಣವೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ..ಇದಕ್ಕೆ ಪೂರಕ ವಾತಾವರಣವನ್ನು ನಮ್ಮ ಶಾಲೆಯಲ್ಲಿ ನಿರ್ಮಾಣ ಮಾಡಿದ್ದೇವೆ. ಜೊತೆಗೆ ಜ್ಞಾನಾನ್ವೇಷಣೆಯ ತಪಸ್ಸಿನ ಮೂಲಕ ಆವಿಷ್ಕಾರದ ಜ್ಯೋತಿಯನ್ನು ಬೆಳಗಿಸುವ ಪ್ರಯತ್ನ ನಮ್ಮದಾಗಿದೆ.
ಶ್ರೀಮತಿ ವಸಂತಿ ಕೆ.
ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿ
ನಮ್ಮ ಶಾಲೆಯಲ್ಲಿ ಶಿಕ್ಷಣವನ್ನು CBSE ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುತ್ತದೆ. ಕ್ರಿಯಾತ್ಮಕ ಹಾಗೂ ಅನುಭವಾಧಾರಿತ ಕಲಿಕೆಯ ಮೂಲಕ ವಿದ್ಯಾರ್ಥಿಗಳು ಸ್ವತಃ ಅನ್ವೇಷಿಸಿ, ಪ್ರಶ್ನಿಸಿ, ಕಲಿಯುವಂತಹ ಸಂತೋಷಕರ ವಾತಾವರಣವನ್ನು ನಿರ್ಮಿಸಲಾಗಿದೆ. ಯೋಜನೆಗಳು ಮತ್ತು ಸಮೂಹ ಚಟುವಟಿಕೆಗಳ ಮೂಲಕ ಚಿಂತನಾ ಶಕ್ತಿ, ಸಂವಹನ ಕೌಶಲ್ಯ ಮತ್ತು ಜೀವನ ಕೌಶಲ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತದೆ. ಪಾಠ್ಯಕ್ರಮದ ಜೊತೆಗೆ ಮೌಲ್ಯಗಳು, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನೂ ಬೆಳೆಸಲಾಗುತ್ತದೆ. ನಮ್ಮ ಉದ್ದೇಶ ಭವಿಷ್ಯಕ್ಕೆ ಸಜ್ಜಾದ ಆತ್ಮವಿಶ್ವಾಸಿ, ಸಹಾನುಭೂತಿಶೀಲ ಮತ್ತು ಜವಾಬ್ದಾರಿಯುತ ವಿದ್ಯಾರ್ಥಿಗಳನ್ನು ರೂಪಿಸುವುದಾಗಿದೆ.
ಶ್ರೀಮತಿ ಸಿಂಧು ವಿ.ಜಿ.
ಪ್ರಾಂಶುಪಾಲರು, ವಿವೇಕಾನಂದ ಸೆಂಟ್ರಲ್ ಸ್ಕೂಲ್










