ಮುಕ್ರಂಪಾಡಿ: ಅನಾರೋಗ್ಯದಿಂದ ಮಹಿಳೆ ನಿಧನ

0

ಪುತ್ತೂರು: ಮುಕ್ರಂಪಾಡಿ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಅನಾರೋಗ್ಯದಿಂದ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಮುಕ್ರಂಪಾಡಿ ನಿವಾಸಿ ಪುತ್ತೂರು ಸರಸ್ವತಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಚಂದ್ರಶೇಖರ ಪೂಜಾರಿ ಎಂಬವರ
ಪತ್ನಿ ಚೈತ್ರ ಪೂಜಾರಿ(35) ಎಂಬವರು ಮೃತಪಟ್ಟವರು.

ಚೈತ್ರ ಪೂಜಾರಿ ಅವರು ಪುತ್ತೂರಿನ ಜನಸೇವಾ ಕೇಂದ್ರವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎ.28ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ ಮೃತರು ಪತಿ ಚಂದ್ರಶೇಖರ್ ಪೂಜಾರಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here