







ಪುತ್ತೂರು: ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮೂವತ್ತರ ಮಾರ್ದಿನಿ ಮತ್ತು ನೃತ್ಯಾಂತರಂಗ 140ರ ಕಾರ್ಯಕ್ರಮವಾಗಿ ವಿಶ್ವ ನೃತ್ಯ ಸಂಭ್ರಮದ ದಶಮಾನೋತ್ಸವ ಎ.29ರಂದು ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.


ವಿವೇಕಾನಂದ ಸಿಬಿಎಸ್‌ಇ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆದಿಲ ಅವರು ಅಭ್ಯಾಗತರಾಗಿ ಭಾಗವಹಿಸಿದ್ದರು. ದೂರದ ಎನ್‌ಆರ್‌ಪುರಂ ಶಾಖೆಯ ಅಂಕಿತಾ ಅವರ ಮೂವರ ಶಿಷ್ಯಂದಿರು, ಬಿಸಿರೋಡ್, ಕೊಕ್ಕಡ, ಪುತ್ತೂರು, ಮಾಣಿ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ನಡೆಯಿತು. ಶ್ಲೋಕದ ಮೂಲಕ ನೃತ್ಯ ಆರಂಭಿಸಲಾಯಿತು. ವಿದ್ವಾನ್ ಗಿರೀಶ್ ಕುಮಾರ್ ಶಂಖನಾದ ಮೊಳಗಿಸಿದರು. ವಿದುಷಿ ಪ್ರೀತಿಕಲಾ ಓಂಕಾರ, ಇಂಚರ ಎಸ್ ಭಟ್ ಪ್ರಾರ್ಥಿಸಿದರು. ಅಪರಂಜಿತ ಪಂಚಾಂಗ ವಾಚನ ಮಾಡಿದರು. ವಿದುಷಿ ತೇಜಸ್ವಿನಿ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.



ವಿಶ್ವ ನೃತ್ಯ ದಿನವನ್ನು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಮ್ಮ ಸಂಸ್ಥೆಯಿಂದ ಆಚರಿಸಲಾಗಿದ್ದು, ಇದೀಗ ದಶಮಾನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಂಸ್ಥೆಯ 30ರ ಸಂಭ್ರಮದೊಂದಿಗೆ ಹಲವು ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಂಡಿದ್ದೇವೆ.
ವಿದ್ವಾನ್ ದೀಪಕ್ ಕುಮಾರ್, ನೃತ್ಯ ನಿರ್ದೇಶಕರು, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು










