







ಪುತ್ತೂರು: ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ ಅವಧಿಗೆ ಅಧ್ಯಕ್ಷರಾಗಿ ಸುಕುಮಾರ ರಾವ್. ಎನ್.ಎಸ್. ಹಾಗೂ ಉಪಾಧ್ಯಕ್ಷರಾಗಿ ರಾಮ ಜೋಯಿಷ ಯಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



ಸಂಘದ ಒಟ್ಟು 13 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಸಾಮಾನ್ಯ ಸ್ಥಾನದಿಂದ ಗಂಗಾಧರ ಗೌಡ ಎ ಅಶ್ವತ್ತಡಿ, ದಿನೇಶ್ ಜಿ. ಗೋಮುಖ, ನವೀನ ಎ ಅಂಜಲ, ಮಹಮ್ಮದ್ ಗಝಲಿ ಯಂ.ಡಿ., ಪ್ರಮೀಳಾ ಬಾಲೆಜಾಲು, ಮಹಿಳಾ ಸ್ಥಾನದಿಂದ ಸರೋಜಿನಿ ಅರ್ಕ, ವಿಶಾಲಾಕ್ಷಿ ಗೋಮುಖ, ಪ.ಜಾತಿ ಸ್ಥಾನದಿಂದ ಲೀಲಾ ಬಟ್ರುಪ್ಪಾಡಿ ಹಾಗೂ ಪ.ಪಂಗಡ ಸ್ಥಾನದಿಂದ ನಾರಾಯಣ ನಾಯ್ಕ ಕುದ್ಮಾನ್ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿರುವುದಿಲ್ಲ. ಸಂಘದ ಕಛೇರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.



ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುಕುಮಾರ ರಾವ್ ಎನ್ ಎಸ್ ಅವರನ್ನು ಗಂಗಾಧರ ಗೌಡ ಎ ಅವರು ಸೂಚಿಸಿ ವಿಶಾಲಾಕ್ಷಿ ಅನುಮೋದಿಸಿದರು, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ರಾಮ ಜೋಯಿಸ.ಯಮ್ ಅವರನ್ನು ನವೀನ ಎ. ರವರು ಸೂಚಿಸಿ ಸರೋಜಿನಿ ಅರ್ಕ ಅನುಮೋದಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಧಿಕಾರಿ ಶೋಭಾ ಎನ್ ಎಸ್. ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಭವ್ಯ ಹಾಗೂ ಹಾಲು ಪರೀಕ್ಷಕಿ ಶೀಲಾವತಿ ಸಹಕರಿಸಿದರು.









