









10 ಹೊಸ ಸದಸ್ಯರ ಸೇರ್ಪಡೆ:
ಯುವಕ ಮಂಡಲದ ಮಹಾಸಭೆಯಲ್ಲಿ ಒಪ್ಪಿಗೆ ಪಡೆದಿದ್ದ 10 ಜನರನ್ನು ಯುವಕ ಮಂಡಲಕ್ಕೆ ಹೊಸ ಸದಸ್ಯರಾಗಿ ಸೇರ್ಪಡೆ ಮಾಡಲಾಯಿತು. ಹೊಸ ಸದಸ್ಯರಾದ ಅಭಿಷೇಕ್ ಪರನೀರು, ಜಿತೇಶ್ ಪಿಲಿಪಂಜರ, ಭವಿಷ್ ಮುಂಡಕೊಚ್ಚಿ, ಯೋಗೀಶ್ ಕಾವು, ಅಮೃತ್ ಕಾವು, ಸಾತ್ವಿಕ್ ಮದ್ಲ, ದೀಕ್ಷಿತ್ ಮದ್ಲ, ನಿಖಿಲ್ ಮದ್ಲ, ಜೀವಿತ್ ಆಚಾರಿಮೂಲೆ, ದೀಕ್ಷಿತ್ ಆಚಾರಿಮೂಲೆಯವರಿಗೆ ಶಾಲು ಹಾಕಿ ಸ್ವಾಗತಿಸಲಾಯಿತು.



ಹೊಸ ಗೌರವಾಧ್ಯಕ್ಷರ ನೇಮಕ:
ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರ ನಿರ್ದೇಶನದಂತೆ ಯುವಕ ಮಂಡಲಕ್ಕೆ ರಾಮಣ್ಣ ನಾಯ್ಕ ಆಚಾರಿಮೂಲೆಯವರನ್ನು ನೂತನ ಗೌರವಾಧ್ಯಕ್ಷರಾಗಿ ಘೋಷಣೆ ಮಾಡಿ ಅಧಿಕಾರ ನೀಡಲಾಯಿತು. ನೂತನ ಗೌರವಾಧ್ಯಕ್ಷರಿಗೆ ವೇದಿಕೆಯಲ್ಲಿ ಶಾಲು ಹಾಕಿ, ಹೂ ನೀಡಿ ಅಭಿನಂದಿಸಲಾಯಿತು.
ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೊಸ ಸದಸ್ಯರ ಸೇರ್ಪಡೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿ ಸಾಧನೆಗೈದ ಮಾಡ್ನೂರು ಗ್ರಾಮದ 25 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮೇ.1ರಂದು ಸಂಜೆ ಮದ್ಲ ತುಡರ್ ಸದನದಲ್ಲಿ ನಡೆಯಿತು.
ಹೊಸ ಸದ್ಯಸರ ಸೇರ್ಪಡೆ ಸಂಘಟನೆಗೆ ಇನ್ನಷ್ಟು ಬಲ-ನನ್ಯ
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ತುಡರ್ ಯುವಕ ಮಂಡಲಕ್ಕೆ ನೂತನ ಅಧ್ಯಕ್ಷರಾಗಿ ಯುವ ಸದಸ್ಯ ಶ್ರೀಕುಮಾರ್ ಬಲ್ಯಾಯರವರು ಅಧಿಕಾರ ಪಡೆದಿರುವುದು ಸಂತೋಷವಾಗಿದೆ, ಪದಗ್ರಹಣ ಕಾರ್ಯಕ್ರಮದಲ್ಲಿ ೧೦ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿರುವುದು ತುಡರ್ ಸಂಘಟನೆಗೆ ಇನ್ನಷ್ಟು ಹೆಚ್ಚು ಬಲ ನೀಡಿದೆ, ನೂತನ ಪದಾಧಿಕಾರಿಗಳ ತಂಡ ಮತ್ತು ಹೊಸ ಸದಸ್ಯರ ಸೇರ್ಪಡೆ ಯುವಕ ಮಂಡಲದಲ್ಲಿ ಬದಲಾವಣೆಯನ್ನು ತರಲಿದೆ. ಸಂಘಟನೆಯಲ್ಲಿ ಏನೇ ಮನಸ್ತಾಪ, ವ್ಯತ್ಯಾಸಗಳು ಬಂದಾಗ ಅಧ್ಯಕ್ಷರಾದವರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಐಕ್ಯಮತದಿಂದ ಮುನ್ನಡೆದಾಗ ಸಂಘಟನೆಯು ಬೆಳೆಯುತ್ತದೆ, ಆ ನಿಟ್ಟಿನಲ್ಲಿ ತಂದೆ ಸುಬ್ರಾಯ ಬಲ್ಯಾಯರ ಮಾರ್ಗದರ್ಶನದಲ್ಲಿ ಶ್ರೀಕುಮಾರ್ರವರು ತುಡರ್ ಸಂಘಟನೆಯನ್ನು ಬಲಿಷ್ಟವಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಲಿದ್ದಾರೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ನಮ್ಮೂರಿನ ಸಾಧಕ ಮಕ್ಕಳನ್ನು ಗುರುತಿಸಿ ಅಭಿನಂದಿಸಿರುವುದು ಯುವಕ ಮಂಡಲದ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಊರಿನ ಪ್ರತಿಭೆಗಳನ್ನು ಗುರುತಿಸಿರುವುದು ಪುಣ್ಯದ ಕೆಲಸ-ಬದ್ರುದ್ದೀನ್
ಮುಖ್ಯ ಅತಿಥಿಯಾಗಿದ್ದ ಕಾವು ಬುಶ್ರಾ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಬದ್ರುದ್ದೀನ್ರವರು ಮಾತನಾಡಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ನಮ್ಮೂರಿನ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಭೇದ ಭಾವವಿಲ್ಲದೇ ಒಂದೇ ವೇದಿಕೆಯಡಿ ತಂದು ಗುರುತಿಸಿ ಅಭಿನಂದಿಸಿದ ಕಾರ್ಯ ಶ್ಲಾಘನೀಯ ಮತ್ತು ಪುಣ್ಯದ ಕೆಲಸವಾಗಿದೆ ಅದಕ್ಕಾಗಿ ಯುವಕ ಮಂಡಲವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಇಂತಹ ಯುವಕ ಮಂಡಲ ಎಲ್ಲಿಯೂ ನೋಡಿಲ್ಲ-ಭವಾನಿ ಬಿ.ಆರ್
ಮುಖ್ಯ ಅತಿಥಿಯಾಗಿದ್ದ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್ರವರು ಮಾತನಾಡಿ ಸದಾ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸಕ್ರಿಯವಾಗಿರುವ ತುಡರ್ ಯುವಕ ಮಂಡಲದ ಎಲ್ಲಾ ಕೆಲಸ ಕಾರ್ಯಗಳು ಮಾದರಿಯಾಗಿದೆ, ಎಂತಹ ಯುವಕ ಮಂಡಲವನ್ನು ನಾನು ಎಲ್ಲಿಯೂ ಮೋಡಿಲ್ಲ, ಸಂಘಕ್ಕೆ ಸ್ವಂತ ಕಟ್ಟಡವನ್ನು ಕಟ್ಟಿಕೊಂಡು ಅದರಲ್ಲೇ ಕಾರ್ಯಕ್ರಮವನ್ನು ನಡೆಸಿ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದೆ, ಇವತ್ತಿನ ಕಾರ್ಯಕ್ರಮದಲ್ಲಿ ಮಕ್ಕಳನ್ನು ಅವರ ಪ್ರತಿಭೆಯನ್ನು ಗುರುತಿಸಿ ಅಭಿನಂದಿಸಿರುವುದು ತುಂಬಾ ಸಂತಸವಾಗಿದೆ, ತುಡರ್ ಯುವಕ ಮಂಡಲದ ಸಮಾಜಸೇವೆ ನಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು.
ಅಂಕ ಅಂತಿಮವಲ್ಲ, ಬದುಕುವ ಶಿಕ್ಷಣ ಮುಖ್ಯ-ರಾಮಣ್ಣ ದೇಲಂಪಾಡಿ
ಮುಖ್ಯ ಭಾಷಣ ಮಾಡಿದ ನಿವೃತ್ತ ಶಿಕ್ಷಕ ರಾಮಣ್ಣ ಗೌಡ ದೇಲಂಪಾಡಿಯವರು ಮಾತನಾಡಿ ಇವತ್ತು ಬಹಳ ಪುಣ್ಯದ ಮತ್ತು ಅಪರೂಪದ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ, ಇವತ್ತು ಸುಮಾರು 25 ಮಕ್ಕಳನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಅವರನ್ನು ಅಭಿನಂದಿಸುತ್ತಿರುವಾಗ ಎದರುರಿನಲ್ಲಿ ಕುಳಿತಿದ್ದ ಅವರ ಪೋಷಕರ ಮನಸ್ಸಿನಲ್ಲಿ, ಮುಖದಲ್ಲಿ ಧನ್ಯತೆಯ ಭಾವವನ್ನು ನೋಡಿದ್ದೇನೆ, ಪೋಷಕರು ತಮ್ಮ ಮಕ್ಕಳಲ್ಲಿ ಯಾವುದನ್ನು ನಿರೀಕ್ಷಿಸುವುದಿಲ್ಲ, ಮಕ್ಕಳ ಸಾಧನೆಯ ಪ್ರತಿಫಲವೇ ಪೋಷಕರಿಗೆ ದೊಡ್ಡ ಗೌರವವಾಗಿದೆ. ಹಾಗಾಗಿ ಮಕ್ಕಳಿಗೆ ಪರೀಕ್ಷೆಯ ಅಂಕ ಮಾತ್ರ ಅಂತಿಮವಲ್ಲ, ನಮ್ಮ ಬದುಕನ್ನು ಅಂಕ ನಿರ್ಧರಿಸುವುದಿಲ್ಲ, ಸಮಾಜದಲ್ಲಿ ಬದುಕುವ ಶಿಕ್ಷಣವನ್ನು ಕಲಿಯಬೇಕು, ಎಲ್ಲವನ್ನೂ ಒಪ್ಪಿಕೊಳ್ಳುವುದಕ್ಕಿಂತ ಪ್ರಶ್ನಿಸುವ ಮನಸ್ಸು ಬಂದಾಗ ಮಕ್ಕಳಲ್ಲಿ ಹೊಸತನ್ನು ಸೃಷ್ಟಿ ಮಾಡಲು ಸಾದ್ಯವಾಗುತ್ತದೆ ಎಂದು ಹೇಳಿದರು.

ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಸಭಾಧ್ಯಕ್ಷತೆ ವಹಿಸಿದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣ:
ಯುವಕ ಮಂಡಲದ ಮುಂದಿನ 2 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀಕುಮಾರ್ ಬಲ್ಯಾಯ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತ್ ಎ.ಆರ್, ಉಪಾಧ್ಯಕ್ಷರಾಗಿ ಅಜಿತ್ ಕುಲಾಲ್ ಮದ್ಲ, ಜತೆ ಕಾರ್ಯದರ್ಶಿಯಾಗಿ ಹರ್ಷಿತ್ ಎ.ಆರ್ರವರು ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಅಧ್ಯಕ್ಷ ಪುರುಷೋತ್ತಮ ಆಚಾರ್ಯಯರವರು ನಿರ್ಣಯ ಪುಸ್ತಕ ನೀಡಿ ಅಧಿಕಾರ ಹಸ್ತಾಂತರ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಶಾಲು ಹಾಕಿ ಗೌರವಿಸಿದರು.
ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ:
ಕಳೆದ 2 ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜಗದೀಶ ನಾಯ್ಕ ಆಚಾರಿಮೂಲೆ ಮತ್ತು ಪುರುಷೋತ್ತಮ ಆಚಾರ್ಯ ನನ್ಯರವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

25 ಮಕ್ಕಳಿಗೆ ಪ್ರತಿಭಾ ಪುರಸ್ಕಾರ:
ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ಮಾಡ್ನೂರು ಗ್ರಾಮದ ಎಲ್ಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಅಭಿನಂದನೆ ನೀಡಲಾಯಿತು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಪೂರ್ವ ಪೂವಂದೂರು(595 ಅಂಕ), ಧನ್ವಿತಾ ಕೆ.ಎಸ್ ಎಲ್.ಎನ್ ನಿಲಯ ಕೌಡಿಚ್ಚಾರ್(581 ಅಂಕ), ಅಭಿಜ್ಞಾ ಕಾವು ಹೊಸಮನೆ(570 ಅಂಕ), ಮನ್ವಿತ್ ಮದ್ಲ(565 ಅಂಕ), ಚಾರ್ವಿ ಪಿ.ಎಸ್ ಮಾಣಿಯಡ್ಕ(551 ಅಂಕ), ಎಂ.ಪಿ ಪ್ರತೀಕ್ಷಾ ಮೇಲ್ಪಾದೆ(540 ಅಂಕ), ವಾಣಿಜ್ಯ ವಿಭಾಗದಲ್ಲಿ ಸಹನಾ ಮಳಿ(593 ಅಂಕ), ಕೆ.ಎಂ ಫಾತಿಮತ್ ತ್ವೈಬಾ(591 ಅಂಕ), ಪಿ.ಎಂ ಮೊಹಮ್ಮದ್ ನಮ್ಶಿಮ್(550 ಅಂಕ), ಎಸ್ಎಸ್ಎಲ್ಸಿಯಲ್ಲಿ ತುಡರ್ ಭರತನಾಟ್ಯ ಕಲಾಸಂಘದ ಪ್ರತಿಭೆ ಅನನ್ಯ ಎ (621 ಅಂಕ), ರಿಫಾ ಫಾತಿಮಾ ಕಮಲಡ್ಕ(593 ಅಂಕ), ಚರಿಷ್ಮಾ ಮಾಣಿಯಡ್ಕ(589 ಅಂಕ), ಚಿನ್ಮಯಿ ಪಟ್ಟಾಜೆ(585 ಅಂಕ), ಪ್ರಿಯಾ ಬಿ ಮದ್ಲ(578 ಅಂಕ), ಫಾತಿಮತ್ ಝಹಿರ ಮೂಲಡ್ಕ(575 ಅಂಕ), ಫಾತಿಮತ್ ಸಹ್ಲಾ ಗುಂಡಿಗದ್ದೆ(573 ಅಂಕ), ನಶ್ವ ಅಮೀನಾ ಬರೆಕೆರೆ(572 ಅಂಕ), ಇಝ ಫಾತಿಮಾ ಅಶ್ವತ್ತಡಿ(572 ಅಂಕ), ಕದೀಜ ಅಝೀಮಾ ಅಶ್ವತ್ತಡಿ(573 ಅಂಕ), ಭವಿಷ್ ಜೆ.ಎಸ್ ಪಳನೀರು(572 ಅಂಕ), ಚಿರಾಗ್ ಸಿ.ಎಂ ಮಾಣಿಯಡ್ಕ(548 ಅಂಕ), ಪೂರ್ವಿ ಪಿ.ಎಸ್ ಮಾಣಿಯಡ್ಕ(543 ಅಂಕ) ಲಾವಣ್ಯ ಮಿನೋಜಿಕಲ್ಲು(540 ಅಂಕ), ಲಕ್ಷ್ಮೀ ಸಸ್ಪೆಟ್ಟಿ(538 ಅಂಕ), ರಂಜಿತ್ ಎಂ ಮಂಜಲ್ತಡ್ಕ(533 ಅಂಕ)ರವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಅಭಿನಂದಿಸಲಾಯಿತು. ಎಲ್ಲಾ ಮಕ್ಕಳಿಗೂ ಶಾಲು ಹೊದಿಸಿ ಹೂ ನೀಡಿ, ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.

ಕುಮಾರಿ ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ತುಡರ್ ಭಜನಾ ಸಂಘದ ಮಾಜಿ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ವಂದಿಸಿದರು. ಯುವಕ ಮಂಡಲದ ಸದಸ್ಯರು ಸಹಕರಿಸಿದರು. ಕಾರ್ಯಕ್ರಮದ ಬಳಿಕ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.










