ಕಬಕ: ಪರವಾನಿಗೆ ನಿಯಮ ಉಲ್ಲಂಘಿಸಿ ಕೆಂಪುಕಲ್ಲು ಸಾಗಾಟ- ಪ್ರಕರಣ ದಾಖಲು

0

ಪುತ್ತೂರು:ಪರವಾನಿಗೆ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವುದು ಪೊಲೀಸರು ತಪಾಸಣೆ ನಡೆಸಿದ ವೇಳೆ ಬೆಳಕಿಗೆ ಬಂದಿದ್ದು ಘಟನೆ ಕುರಿತು ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೇ 1ರಂದು ಪೊಲೀಸರು ಕಬಕ ಗ್ರಾಮದ ಮುರ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕಬಕ ಕಡೆಯಿಂದ ಪುತ್ತೂರು ಕಡೆಗೆ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವ ಲಾರಿಯನ್ನು ನಿಲ್ಲಿಸಿ ಚಾಲಕನಲ್ಲಿ ವಿಚಾರಿಸಿದಾಗ, ಕೆಂಪು ಕಲ್ಲುಗಳನ್ನು ಬಂಟ್ವಾಳ ತಾಲೂಕು ಪೆರುವಾಯಿ ಕಲ್ಲಿನ ಕೋರೆಯಿಂದ ಲಾರಿಯ ಮಾಲಕ ರಮೇಶರವರು ತಿಳಿಸಿದಂತೆ ಲೋಡ್ ಮಾಡಿಕೊಂಡು ಉಪ್ಪಿನಂಗಡಿ ಎಂಬಲ್ಲಿಗೆ ಕೊಂಡುಹೋಗುವುದಾಗಿ ತಿಳಿಸಿದ್ದರು.ಪೊಲೀಸರು ಪರವಾನಿಗೆ ಪರಿಶೀಲಿಸಿದಾಗ ಬಂಟ್ವಾಳ ಗ್ರಾಮದ ಪೆರುವಾಯಿಯಿಂದ ಚಿಕ್ಕಮಗಳೂರಿಗೆ ಎಂದು ನಮೂದಾಗಿರುವುದು ಕಂಡು ಬಂದಿತ್ತು. ಚಿಕ್ಕಮಂಗಳೂರು ಜಿಲ್ಲೆಗೆ ಪರವಾನಿಗೆ ಪಡೆದು ಒಂದೇ ಪರವಾನಿಗೆಯಲ್ಲಿ ಉಪ್ಪಿನಂಗಡಿಯ ಕಡೆಗೆ 2ರಿಂದ 3 ಟ್ರಿಪ್ ಕೆಂಪು ಕಲ್ಲು ಸಾಗಾಟ ಮಾಡಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಲಾರಿ ಮಾಲಕ ರಮೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here