






ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಎಂಬಲ್ಲಿ ಹೆದ್ದಾರಿ ಪಾರ್ಶ್ವದಲ್ಲಿ ಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವವು ಪೂಜ್ಯ ಮುನಿಗಳಾದ 108 ಶ್ರೀ ವೀರಸಾಗರ ಮುನಿ ಮಹಾರಾಜರಿಂದ ನೆರವೇರಿಸಲ್ಪಟ್ಟಿತ್ತು.


ಈ ಸಂಧರ್ಭದಲ್ಲಿ ಕಾರ್ಕಳ ಜೈನ ಮಠದ ರಾಜಗುರು ಧ್ಯಾನ ಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಮತ್ತು ಮೂಡಬಿದ್ರ್ರೆ ಜೈನ ಮಠದ ಭಾರತಭೂಷಣ ಭಟ್ಟಾರಕ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಉಪಸ್ಥಿತರಿದ್ದರು .



ಬಸದಿಯಲ್ಲಿ ಆದಿತ್ಯವಾರದಂದು ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಶ್ರೀ ಜಿನಭಗವಂತ ಮುನಿಮಹಾರಾಜರ ಆಹಾರ ದಾನ ವಿಧಿ, ಗಂಧಯಂತ್ರಧಾರಣಾ ವಿಧಾನ, ಮಂತ್ರನ್ಯಾಸ, ತಿಲಕ ನ್ಯಾಸಪೂರ್ವಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಬಿಂಬ ಪ್ರತಿಷ್ಠಾ ವಿಧಾನ , ಮುಖವಸ್ತ್ರ ಉದ್ಘಾಟನೆ, ಶಿಖರಾರೋಹಣ , ಮಾನಸ್ತಂಭೋಪರಿ ಶ್ರೀ ಜಿನ ಬಿಂಬಗಳ ಸ್ಥಾಪನೆ, ಪಂಚ ಕಲ್ಯಾಣ ಆರಾಧನಾ ವಿಧಾನ , ಸಮವಸರಣ ಪೂಜೆ, ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ ವಿಧಿ, ಸಿದ್ಧಚಕ್ರ ಯಂತ್ರರಾಧನಾ ವಿಧಾನ , ಅಗ್ರೋಧಕ ಮೆರವಣಿಗೆ, ಮಹೋತ್ಸವ, ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳಿಗೆ 108 ಕಲಶಗಳಿಂದ ಮಹಾ ಅಭಿಷೇಕ, ಮಹಾಮಂಗಳಾರತಿ, ಪಾದ ಪೂಜೆ, ತೋರಣ ವಿಸರ್ಜನೆ , ಕಂಕಾ ವಿಸರ್ಜನೆ ಮೊದಲಾದ ವಿಧಿ ವಿಧಾನಗಳು ನಡೆದವು.

ಈ ಸಂಧರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಜ್ರಕುಮಾರ್ ಜೈನ್ , ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ, ಪಂಚಕಲ್ಯಾಣ ಸಮಿತಿಯ ಅಧ್ಯಕ್ಷ ವಿಧ್ಯಾಧರ ಜೈನ್ ,ಪ್ರಮುಖರಾದ ಶಾಂತಿರಾಜ ನಲ್ಲೂರು , ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ , ಅನುದೀಪ್ ರೈ, ನಿತೇಶ್ ಕುಮಾರ್ ಪುತ್ತಿಲ, ಪ್ರಭಾಕರ್ ರೈ, ರಕ್ಷಿತ್ ಕುಮಾರ್ ಪುತ್ತಿಲ, ಜಯರಾಜ್ ಜಾರಳಿಕೆ, ಸುಭಾಶ್ ಜೈನ್ , ನಿರಂಜನ್ ಕೊಂಡೆ, ಅರುಣಾ ಡಿ. ರೈ, ಸುನಿಲ್ ಕುಮಾರ್ ಅಗರಿ, ಸಮಂತ್ ನೆಲ್ಯಾಡಿ, ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್ , ಅಭಯ್ ಜೈನ್, ವಿಜೇತ್ ಜೈನ್ ,ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಮಹೇಶ್ ಪಡಿವಾಳ ಮೊದಲಾದವರು ಭಾಗವಹಿಸಿದ್ದರು.










