






ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದ ನೂತನ ಕರೆ ರಚನೆಗಾಗಿ ಭೂಮಿ ಪೂಜೆ ನಡೆಸಲಾಯಿತು.


ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಮತ್ತು ಸಹಾಯಕ ಪ್ರಶಾಂತ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ಯಾವುದೇ ಅಡೆತಡೆ ಇಲ್ಲದೆ ಮಹಾಲಿಂಗೇಶ್ವರನ ಅನುಗ್ರಹದಿಂದ ನೂತನ ಕರೆಯ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ ಎಂದು ವಸಂತ ಕೆದಿಲಾಯರವರು ಪ್ರಾರ್ಥಿಸಿದರು.



ಬರುವ ವರ್ಷ ಹೊಸ ಕರೆಯಲ್ಲಿ ಕಂಬಳ-ಚಂದ್ರಹಾಸ ಶೆಟ್ಟಿ:
ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ರವರು ಮಾತನಾಡಿ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ಕಳೆದ 33 ವರ್ಷಗಳಿಂದ ಬಹಳ ಅದ್ದೂರಿಯಾಗಿ ಕೋಟಿ ಚೆನ್ನಯ ಕಂಬಳವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಹಾಲಿಂಗೇಶ್ವರ ದೇವಸ್ಥಾನದ ಮಾಸ್ಟರ್ಪ್ಲ್ಯಾನ್ ನಂತೆ ಕಂಬಳದ ಕರೆಯನ್ನು ಸ್ವಲ್ಪ ದೂರ ಮಾಡಬೇಕು ಎಂದು ಕಳೆದ ವರ್ಷ ಪುತ್ತೂರು ಶಾಸಕರು ಕೇಳಿಕೊಂಡ ಮೇರೆಗೆ ಕಂಬಳ ಮುಗಿದ ತಕ್ಷಣ ಕರೆ ಬದಲಾಯಿಸುವ ಕಾರ್ಯವನ್ನು ಮಾಡಲಾಗುವುದೆಂಬ ಭರವಸೆ ನೀಡಲಾಗಿತ್ತು ಮಳೆಗಾಲದ ಮೊದಲು ನಾವು ಕರೆಯ ಕೆಲಸವನ್ನು ಪ್ರಾರಂಭಿಸಿದ್ದು ಬರುವ ವರ್ಷದ ಕಂಬಳವನ್ನು ಹೊಸ ಕೆರೆಯಲ್ಲಿ ಮಾಡುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಹೊಸ ಕರೆಯನ್ನು ಮಾಡಲು ಬಹಳಷ್ಟು ಖರ್ಚುಗಳಿದ್ದು ಎಷ್ಟು ಖರ್ಚು ತಗಲಬಹುದು ಎಂದು ಈಗಲೇ ಹೇಳೋದು ಸಾಧ್ಯವಿಲ್ಲ. ಕರೆಯ ಕೆಲಸ ಸಂಪೂರ್ಣ ಆದ ಬಳಿಕವೇ ಹೇಳಬಹುದಾಗಿದೆ. ಈ ಕರೆಯ ಕೆಲಸ ಕಾರ್ಯಗಳು ಸಂಪೂರ್ಣವಾಗಿ ನಡೆಯುವಂತಾಗಲು ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಪುತ್ತೂರು ಕಂಬಳ ಜಿಲ್ಲೆಯಲ್ಲಿ ಪ್ರಸಿದ್ಧ- ಶಕುಂತಲಾ ಟಿ ಶೆಟ್ಟಿ:
ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿರುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಮಾತನಾಡಿ ಪುತ್ತೂರು ಕೋಟಿ ಚೆನ್ನಯ ಕಂಬಳ ಜಿಲ್ಲೆಯಲ್ಲಿಯೇ ಸುಪ್ರಸಿದ್ಧ ಕಂಬಳವಾಗಿದೆ ಇಲ್ಲಿನ ಈ ಕಂಬಳಕ್ಕೆ ಸರಿಸಾಟಿಯಾದ ಕಂಬಳ ಇನ್ನೊಂದಿಲ್ಲ ಎಂದು ಹೇಳಿದರು. ಹಳೆಯ ಕಂಬಳಗಳು ಬಹಳಷ್ಟು ಇದೆಯಾದರೂ ಒಮ್ಮೆ ನಿಂತಿದ್ದ ಕಂಬಳವನ್ನು ಪ್ರಾರಂಭ ಮಾಡಿ ಇವತ್ತಿನವರೆಗೆ ಯಾವುದೇ ಅಡೆತಡೆಗಳು ಬಂದರೂ ಎಲ್ಲವನ್ನು ಎದುರಿಸಿ ಸಾಹಸಮಯವಾಗಿ ನಡೆಸಿಕೊಂಡು ಬಂದ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತು ಅವರ ತಂಡವು ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದವರಾಗಿದ್ದಾರೆ ಈಗ ನೂತನ ಕರೆ ನಿರ್ಮಾಣಕ್ಕೆ ಮುಂದಾಗಿದ್ದು ಈ ಕೆಲಸ ಕಾರ್ಯಗಳು ವ್ಯವಸ್ಥಿತವಾಗಿ ವೇಗವಾಗಿ ಸಾಗಲಿ ಎಂದು ಹಾರೈಸಿದರು.
ಅದ್ದೂರಿಯ ಕಂಬಳ ಕರೆ ನಿರ್ಮಾಣ-ಈಶ್ವರ ಭಟ್:
ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಕೋಶಾಧಿಕಾರಿ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ರವರು ಮಾತನಾಡಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ಕಂಬಳ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಕಂಬಳ ಸಮಿತಿ ವತಿಯಿಂದ ಹೊಸ ಕರೆಯನ್ನು ನಿರ್ಮಾಣ ಮಾಡುವುದೆಂದು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಯವರ ಮಾರ್ಗದರ್ಶನದಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಮಿತಿಯವರ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರ ಸಹಕಾರದಿಂದ ಅದ್ದೂರಿಯ ಕಂಬಳದ ಕರೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ಜೋಡುಕರೆ ಕಂಬಳದ ಹೊಸ ಕರೆ ನಿರ್ಮಾಣ ಯಶಸ್ವಿಯಾಗಿ ನೆರವೇರಬೇಕೆಂಬ ಉದ್ದೇಶದಿಂದ ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮೂಲ ನಾಗನಕಟ್ಟೆಯಲ್ಲಿ ಪೂಜಿ ಸಲ್ಲಿಸಲಾಯಿತು.

ಕೋಟಿ ಚೆನ್ನಯ ಕಂಬಳ ಸಮಿತಿಯ ಸಂಚಾಲಕ ವಸಂತ ಕುಮಾರ್ ರೈ ದುಗಳ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ ವಿ, ಉಪಾಧ್ಯಕ್ಷರಾದ ಸುದರ್ಶನ್ ನಾಕ್ ಕಂಪ, ಜೋಕಿಂ ಡಿ ಸೋಜಾ, ವಲೆರಿಯನ್ ಡಯಾಸ್, ರೋಷನ್ ರೈಬನ್ನೂರು,ರಂಜಿತ್ ಬಂಗೇರ, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಪ್ರೇಮಾನಂದ ನಾಕ್, ನವೀನ್ ನಾೖಕ್ ಬೆದ್ರಾಳ, ಧಿರಜ್ ಗೌಡ ಕೊಡಿಪ್ಪಾಡಿ,ಮೋಹನ್ ರೈ ಸೂತ್ರಬೆಟ್ಟು, ಉಮಾಶಂಕರ್ ನ್ಯಾಕ್ ಪಾಂಗಳಾಯಿ, ಸುಧಾಕರ ಶೆಟ್ಟಿ ಮಿತ್ತೂರು,ಚಂದ್ರಹಾಸ ಶೆಟ್ಟಿ ಪಾಲ್ತಾಡು, ಜಯಪ್ರಕಾಶ್ ಬದಿನಾರ್, ಸುದೇಶ್ ನಾಕ್ ಚಿಕ್ಕಪುತ್ತೂರು, ವಿಲ್ರೇಡ್ ಫೆರ್ನಾಂಡೀಸ್, ಪ್ರವೀಣ್ ಶೆಟ್ಟಿ, ಕೃಷ್ಣವೇಣಿ, ಶರತ್ ಕೇಪುಳು, ಶಶಿ ನೆಲ್ಲಿಕಟ್ಟೆ, ಪ್ರತೀಕ್ ಚಿಕ್ಕಪುತ್ತೂರು, ಲೋಕೇಶ್ ಪೆಲತ್ತಡಿ, ರೋಹನ್, ಬಾಲಕೃಷ್ಣ ಶೆಟ್ಟಿ ಸುರಭಿ ಮೊದಲಾದವರು ಉಪಸಿತರಿದ್ದರು.










