ಉಪ್ಪಿನಂಗಡಿ: ರೋಡ್ ರೋಲರ್ ಚಲಿಸಿ ವ್ಯಕ್ತಿಯ ದುರ್ಮರಣ

0

ಉಪ್ಪಿನಂಗಡಿ: ರಸ್ತೆ ಕಾಮಗಾರಿಯ ಸಂದರ್ಭ ರೋಡ್ ರೋಲರ್‌ನ ಅಡಿಗೆ ಬಿದ್ದು ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಮೇ.9ರಂದು ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ.


ಬಿಹಾರ ಮೂಲದ ರಾಮಚಂದ್ರ ಶಿಖಾರಿ (55) ಮೃತ ವ್ಯಕ್ತಿ. ಇವರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ಕಾರ್ಮಿಕ. ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಗಾಂಧಿಪಾರ್ಕ್ ಬಳಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಇದರ ಕಾಮಗಾರಿಗಾಗಿ ರೋಡ್ ರೋಲರ್ ಅನ್ನು ಅಲ್ಲಿ ನಿಲ್ಲಿಸಲಾಗಿತ್ತು. ಕಾಮಗಾರಿ ನಿರತ ಕಾರ್ಮಿಕ ರಾಮಚಂದ್ರ ಶಿಖಾರಿ ರೋಲರ್‌ನ ನೆರಳು ಆವರಿಸಿ ಅದರ ಚಕ್ರದ ಬಳಿ ಮಲಗಿದ್ದ. ಈ ವೇಳೆ ರೋಲರ್ ಚಾಲಕ ನೇರವಾಗಿ ಬಂದವ ಈತ ಮಲಗಿರುವುದನ್ನು ಗಮನಿಸದೇ ರೋಲರನ್ನು ಏಕಾಏಕಿ ಚಲಾಯಿಸಿದಾಗ ಮಲಗಿದ್ದ ಈತನನ್ನು ಅಪ್ಪಚ್ಚಿಯಾಗಿಸಿಕೊಂಡು ರೋಡ್ ರೋಲರ್ ಚಲಿಸಿತು. ಗಂಭೀರವಾಗಿ ಗಾಯಗೊಂಡ ಈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here