






ನೆಲ್ಯಾಡಿ: ಮೇ.9ರಂದು ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ನೆಲ್ಯಾಡಿ ಗ್ರಾಮದ ಪುಚ್ಚೇರಿ ಪರಿಸರದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.



ಪುಚ್ಚೇರಿ, ಪಿಲವೂರು, ಕುಡ್ತಾಜೆ ಪರಿಸರದಲ್ಲಿ ಭಾರೀ ಗಾಳಿಗೆ ಹಟ್ಟಿ, ಮನೆಗಳ ಹಂಚು ಹಾರಿ ಹೋಗಿವೆ. 500ಕ್ಕೂ ಹೆಚ್ಚು ಅಡಿಕೆ ಮರಗಳು, ನೂರಾರು ರಬ್ಬರ್ ಮರಗಳು ಧರೆಗುರುಳಿವೆ.



ಕುಡ್ತಾಜೆ ಜಯಂತ ಎಂಬವರ ಮನೆಯ ಶೀಟುಗಳು ಗಾಳಿಗೆ ಬಿದ್ದು ಹಾನಿಗೊಂಡಿವೆ. ಬರಮೇಲು ಪ್ರಕಾಶ್ ಎಂಬವರ ಹಟ್ಟಿಯ ಸಿಮೆಂಟ್ ಶೀಟ್, ತೋಟ ಶೇಖರ ಗೌಡರವರ ಮನೆ, ಹಟ್ಟಿಯ ಹಂಚುಗಳು ಹಾನಿಗೊಂಡಿವೆ. ಇಂದುಶೇಖರ ಪುಚ್ಚೇರಿ, ಜನಾರ್ದನ ಪಿಲವೂರು ಸಹಿತ ಈ ಭಾಗದ ಹಲವರ ತೋಟಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದು ವ್ಯಾಪಕ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.










